ಕಾನೂನಿಗಿಂತ ದೊಡ್ಡವರಿಲ್ಲ, ರೆಡ್ಡಿ ಡೀಲ್‌ ಬಗ್ಗೆ ನನಗೇನು ಗೊತ್ತಿಲ್ಲ ಎಂದ ಶ್ರೀರಾಮುಲು

ಬಳ್ಳಾರಿ: ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಆಂಬಿಡೆಂಟ್‌ ಮಾರ್ಕೆಟಿಂಗ್ ಲಿಮಿಟೆಡ್ ವಂಚನೆ ಪ್ರಕರಣದ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

ನಾನು ಚುನಾವಣಾ ಪ್ರಚಾರದಿಂದ ಸುಸ್ತಾಗಿದ್ದೇನೆ. ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ನಾನು ಬೆಳಗ್ಗೆಯಿಂದ ಚಾನೆಲ್‌ಗಳಲ್ಲಿ ನೋಡುತ್ತಿದ್ದೇನೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಕಾನೂನು ಅದರ ಕೆಲಸ ಅದು ಮಾಡುತ್ತದೆ. ಹಾಗಾಗಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಈ ಪ್ರಕರಣ ಕುರಿತಂತೆ ನನಗೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ. ಚುನಾವಣೆಯಲ್ಲಿ ಮಾತ್ರ ನಾನು ಬ್ಯುಸಿಯಾಗಿದ್ದೆ. ಕಾನೂನು ಅದರ ಕೆಲಸವನ್ನು ಅದು ಮಾಡಿಕೊಂಡು ಹೋಗುತ್ತದೆ ಎಂದು ಹೇಳಿದರು.

ಬಳ್ಳಾರಿ ಲೋಕಸಭಾ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿ, ಇಷ್ಟು ದೊಡ್ಡ ಅಂತರ ಆಗುತ್ತದೆ ಎಂದುಕೊಂಡಿರಲಿಲ್ಲ. ಆದರೆ ಬಹಳ ದೊಡ್ಡ ಅಂತರವಾಗಿದೆ. ನಾವು ಚುನಾವಣೆಗೆ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)