ಬಳ್ಳಾರಿ : ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಸೇರಿರುವ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಕ್ರಮ ಗಣಿಗಾರಿಕೆಯಿಂದ ರೆಡ್ಡಿ ಗಳಿಸಿದ 50 ಕೋಟಿ ರೂ., ಆಸ್ತಿಯನ್ನು ಅರಿಯರ್ಸ್ ಆಫ್ ಲ್ಯಾಂಡ್ ರೆವಿನ್ಯೂ ಎಂದು ಪರಿಗಣಿಸಿಬೇಕು. ರಾಜ್ಯದ ಅದಿರು 884.13 ಕೋಟಿ ಮೌಲ್ಯದ 28 ಲಕ್ಷ ಟನ್ ಲೂಟಿಯಾಗಿದೆ ಎಂದು ತೀರ್ಪಿನಲ್ಲಿ ಸ್ಪಷ್ಟ ಉಲ್ಲೇಖವಾಗಿದೆ. ಅಕಾರ ಇದ್ದಾಗ ಅಹಂ ತೋರಿಸಿ, ಲೂಟಿ ಮಾಡುವ ಪ್ರವೃತ್ತಿ ತೋರಿದವರಿಗೆ ಇಂದಲ್ಲ, ನಾಳೆ ನ್ಯಾಯದೇವತೆ ಇದ್ದಾಳೆ ಎಂಬುವುದು ಸ್ಪಷ್ಟವಾಗಿದೆ. ಅಕ್ರಮ ಗಣಿಗಾರಿಕೆ ಅಂದಿನ ರಾಜ್ಯ ಸರಕಾರದ ಜಿಲ್ಲಾಡಳಿತ, ಜಿಲ್ಲೆಯ ಸಂಸದರು, ಶಾಸಕರು, ಸಚಿವರು, ಬಿಎಸ್‌ವೈ ಮತ್ತವರ ತಂಡ, ಅಂದಿನ ಗೆಳೆಯ ಬಿ.ಶ್ರೀರಾಮುಲು ಸಹಕರಿಸಿದ್ದಾರೆ ಎಂದು ಆರೋಪಿಸಿದರು.
ಪಾಕಿಸ್ತಾನ ಅಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲು ಹಾಗೂ ಉಗ್ರರ ಅಡಗುತಾಣಗಳನ್ನು ನಾಶ ಮಾಡುವುದಕ್ಕೆ ಇದೊಂದು ಒಳ್ಳೆಯ ಅವಕಾಶವಾಗಿತ್ತು. ಆದರೆ ಯಾವ ಕಾರಣಕ್ಕೆ ಕದನ ವಿರಾಮ ಆಯಿತು ಗೊತ್ತಾಗಿಲ್ಲ. ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದಾಗ ಅಲ್ಲಿ ಸೆಕ್ಯುರಿಟಿಯೇ ಇರಲಿಲ್ಲ. ಸರ್ವ ಪಕ್ಷದ ಸಭೆ ಕರೆದಾಗ ಪ್ರಧಾನಿಯೇ ಸಭೆಗೆ ಎರಡು ಬಾರಿ ಗೈರಾದರು. ಅಮೇರಿಕಾದ ಅಧ್ಯಕ್ಷ ಟ್ರಂಪ್ ಕದನ ವಿರಾಮವನ್ನು ಘೋಷಿಸಿದ್ದಾರೆ.ಇದಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಕಾಶ್ಮೀರ ಮತ್ತು ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರದೇಶ ಬಿಜೆಪಿ ಸಚಿವನೊಬ್ಬ ಸೋಫಿಯಾ ಅವರನ್ನು ಉಗ್ರಗಾಮಿ ಸಹೋದರಿ ಅಂತಾ ಕರೆದಿರುವುದು. ಈ ದೇಶದ ಸೇನೆಗೆ ಮಾಡಿರುವ ಅಪಚಾರವಾಗಿದೆ. ಇಂತವರನ್ನು ಮಂತ್ರಿ ಮಾಡಿದ್ದಿರಲ್ಲ ಮಿಸ್ಟರ್ ಪ್ರಧಾನ ಮಂತ್ರಿ ಮೋದಿ ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಹೆಗಡೆ, ಅಸುಂಡಿ ನಾಗರಾಜ್, ಲೋಕೇಶ್ ಇದ್ದರು. ಸೇರಿ ಇತರರಿದ್ದರು.
—
