ಪಿಯು ಪರೀಕ್ಷೆಗೆ 424 ವಿದ್ಯಾರ್ಥಿಗಳು ಗೈರು

ಬಳ್ಳಾರಿ: ಜಿಲ್ಲೆಯ 22 ಕೇಂದ್ರಗಳಲ್ಲಿ ಗುರುವಾರ ಪಿಯುಸಿ ದ್ವಿತೀಯ ವರ್ಷದ ಗಣಿತ, ಸಂಖ್ಯಾಶಾಸ್ತ್ರ ಹಾಗೂ ಐಚ್ಛಿಕ ಕನ್ನಡ ಪರೀಕ್ಷೆಗಳು ನಡೆದವು.

ಒಟ್ಟು 424 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಗಣಿತ ಪರೀಕ್ಷೆಗೆ 7495 ವಿದ್ಯಾರ್ಥಿಗಳ ಪೈಕಿ 152 ವಿದ್ಯಾರ್ಥಿಗಳು ಗೈರಾಗಿದ್ದರು. ಸಂಖ್ಯಾಶಾಸ್ತ್ರದ 7318 ವಿದ್ಯಾರ್ಥಿಗಳಲ್ಲಿ 237 ಹಾಗೂ ಐಚ್ಛಿಕ ಕನ್ನಡದ 1378 ವಿದ್ಯಾರ್ಥಿಗಳ ಪೈಕಿ 35 ವಿದ್ಯಾರ್ಥಿಗಳು ಗೈರಾಗಿದ್ದರು. ಗಣಿತ ಹಾಗೂ ಸಂಖ್ಯಾಶಾಸ್ತ್ರ ಪರೀಕ್ಷೆ ಎಲ್ಲ 22 ಕೇಂದ್ರಗಳಲ್ಲಿ ನಡೆದರೆ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜು, ಸರ್ಕಾರಿ ಪಿಯು ಕಾಲೇಜು, ಹಡಗಲಿಯ ಜಿಬಿಆರ್ ಕಾಲೇಜು, ಬಳ್ಳಾರಿಯ ವಾರ್ಡ್ಲಾ, ಸೇಂಟ್ ಜಾನ್ಸ್ ಕಾಲೇಜು, ಹಬೊಹಳ್ಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಐಚ್ಛಿಕ ಪರೀಕ್ಷೆ ನಡೆಯಿತು.