Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ವಹಿವಾಟು 30,209 ಕೋಟಿ ರೂ.

Friday, 08.06.2018, 5:17 PM       No Comments

<<2017-18ರಲ್ಲಿ 216 ಕೋಟಿ ರೂ. ಲಾಭ, ಒಂದು ಕೋಟಿ ದಾಟಿದ ಗ್ರಾಹಕರ ಸಂಖ್ಯೆ>>

ಬಳ್ಳಾರಿ: ನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ವಹಿವಾಟು 30,209 ಕೋಟಿ ರೂ.ಗೆ ತಲುಪಿದೆ. ಈ ಮೂಲಕ 30 ಸಾವಿರ ಕೋಟಿ ರೂ.ವಹಿವಾಟು ದಾಟಿದ ದೇಶದ ಎರಡನೇ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಬ್ಯಾಂಕ್ ಪಾತ್ರವಾಗಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಆರ್.ರವಿಕುಮಾರ್ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಎನ್.ಜಿ.ಶೈಲೇಂದ್ರ ಉಡುಪ, ಎಸ್.ಜೆ.ಎಫ್.ರವೀಂದ್ರನಾಥ ಬ್ಯಾಂಕ್‌ನ ವಹಿವಾಟು ಕುರಿತು ಮಾಹಿತಿ ನೀಡಿದರು. 11 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಪಿಕೆಜಿ ಬ್ಯಾಂಕ್ 10 ಪ್ರಾದೇಶಿಕ ಕಚೇರಿಗಳು, 655 ಶಾಖೆಗಳು, 279 ಎಟಿಎಂಗಳನ್ನು ಹೊಂದಿದೆ ಎಂದು ಹೇಳಿದರು.

ಬ್ಯಾಂಕ್ 16,147 ಕೋಟಿ ರೂ.ಠೇವಣಿ ಹೊಂದಿದ್ದು, 14,062 ಕೋಟಿ ರೂ.ಮುಂಗಡ ನೀಡಿದೆ. 2017-18ನೇ ಸಾಲಿನಲ್ಲಿ ಬ್ಯಾಂಕ್‌ನ ವ್ಯವಹಾರ 2,448 ಕೋಟಿ ರೂ.ಹೆಚ್ಚಳವಾಗಿದೆ. ಬ್ಯಾಂಕ್ ಒಟ್ಟು 427 ಹಾಗೂ ನಿವ್ವಳ 216 ಕೋಟಿ ರೂ.ಲಾಭ ಗಳಿಸಿದೆ.

ನಿವ್ವಳ ಲಾಭ ಗಳಿಕೆಯಲ್ಲಿ ದೇಶದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಪಿಕೆಜಿ ಬ್ಯಾಂಕ್ ದ್ವಿತೀಯ ಸ್ಥಾನ ಪಡೆದಿದೆ. 13,022 ಕೋಟಿ ರೂ. ಆದ್ಯತಾ ವಲಯ, 10,712 ಕೃಷಿ, 1,505 ಕೋಟಿ ರೂ.ಸಣ್ಣ ಹಾಗೂ ಕಿರು ಉದ್ದಿಮೆ, 1,748 ರೀಟೇಲ್, 663 ಗೃಹ, 428 ಕೋಟಿ ರೂ. ಇತರೆ ವೈಯಕ್ತಿಕ ಸಾಲ ನೀಡಲಾಗಿದೆ. ಆದ್ಯತಾ ಹಾಗೂ ಕೃಷಿ ವಲಯಕ್ಕೆ ಪ್ರಾಮುಖ್ಯತೆ ನೀಡುತ್ತಿರುವ ಬ್ಯಾಂಕ್ ಕ್ರಮವಾಗಿ ಶೇ.93 ಮತ್ತು ಶೇ.76ರಷ್ಟು ಸಾಲ ನೀಡಿದೆ ಎಂದರು.

ಮುದ್ರಾ ಯೋಜನೆಯಡಿ 2.86 ಲಕ್ಷ ಫಲಾನುಭವಿಗಳಿಗೆ 2,412 ಕೋಟಿ ರೂ.ಸಾಲ ನೀಡಲಾಗಿದೆ. ಮೈಕ್ರೋ ಎಟಿಎಂಗಳ ಮೂಲಕ ಗ್ರಾಮೀಣ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ತಲುಪಿಸಲಾಗುತ್ತಿದೆ. 73,032 ಸ್ವಸಹಾಯ ಗುಂಪುಗಳಿಗೆ 869 ಕೋಟಿ ರೂ.ಸಾಲ ನೀಡಲಾಗಿದೆ. ಬ್ಯಾಂಕ್‌ನ ಈ ಸಾಧನೆಗೆ ಕೇಂದ್ರ ಸರ್ಕಾರದ ಪುರಸ್ಕಾರ ಸಂದಿದೆ. ಬ್ಯಾಂಕ್‌ನ ಉಳಿತಾಯ ಖಾತೆಗಳಿಗೆ ಆಧಾರ ಜೋಡಣೆ ಪ್ರಕ್ರಿಯೆ ಶೇ.98ರಷ್ಟು ಮುಗಿದಿದೆ. ಜನ್‌ಧನ್ ಯೋಜನೆಯ ಎಲ್ಲ ಖಾತೆಗಳಿಗೂ ಆಧಾರ ಜೋಡಣೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ 3.13 ಲಕ್ಷ ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯಡಿ 62,231 ಜನರ ನೋಂದಣಿ ಮಾಡಲಾಗಿದೆ. ಅಟಲ್ ಪೆನ್ಷನ್ ಯೋಜನೆಯಡಿ 82,382 ಜನರ ನೋಂದಣಿ ಮೂಲಕ ದೇಶದಲ್ಲಿ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ದೇಶದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ನಮ್ಮ ಬ್ಯಾಂಕ್ ಮೊದಲನೇಯದಾಗಿ ಅಪಘಾತ ವಿಮೆ ಒಳಗೊಂಡಿರುವ ರುಪೇ ಪ್ಲಾಟಿನಂ ಕಾರ್ಡ್ ಗಳನ್ನು ವಿತರಿಸಲಾಗಿದೆ. ಬೆಂಗಳೂರಿನಲ್ಲಿ ಬ್ಯಾಂಕ್‌ನ ಕಾಲ್ ಸೆಂಟರ್ ಆರಂಭಿಸಲಾಗಿದೆ ಎಂದರು. ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಕೆ.ಆರ್.ರವೀಂದ್ರ ಇತರರಿದ್ದರು.

ಸೆಲ್ಫಿ ಅಕೌಂಟ್ ಓಪನಿಂಗ್ ಆ್ಯಪ್ : ಖಾತೆ ತೆರೆಯುವ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಡಿಜಿ ಪಿಕೆಜಿಬಿ ಸೆಲ್ಫಿ ಅಕೌಂಟ್ ಓಪನಿಂಗ್ ಆ್ಯಪ್ ಆರಂಭಿಸಲಾಗಿದೆ. ಈ ಆ್ಯಪ್ ಮೂಲಕ 1.31 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ವಿವಿಧ ಬಿಲ್‌ಗಳ ಪಾವತಿಗೆ ಭಾರತ್ ಬಿಲ್ ಪೇಮೆಂಟ್ ಸಿಸ್ಟಂ ಮೂಲಕ ಅನುಕೂಲ ಕಲ್ಪಿಸಲಾಗಿದೆ. ಆದ್ಯತಾ ಹಾಗೂ ಕೃಷಿ ವಲಯದ ಸಾಲ ವಿತರಣೆಗೆ ಅಸೋಚಾಮ್‌ನಿಂದ ಕ್ರಮವಾಗಿ ಮೊದಲ ಹಾಗೂ ದ್ವಿತೀಯ ಸೇರಿ ಬ್ಯಾಂಕ್ ವಿವಿಧ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನವಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

Back To Top