ಪ್ರಭಾರ ಉಪತಹಸೀಲ್ದಾರ್ ಎಸಿಬಿ ಬಲೆಗೆ

ಬಳ್ಳಾರಿ: ತಹಸಿಲ್ ಕಚೇರಿಯ ಪ್ರಭಾರ ಉಪ ತಹಸೀಲ್ದಾರ್ ಪರಸಪ್ಪ ಘಟ್ಟಿ ಗುರು ಕಾಲನಿ 2ನೇ ಕ್ರಾಸ್ ಬಳಿ 50 ಸಾವಿರ ರೂ.ಸ್ವೀಕರಿಸುತ್ತಿದ್ದ ವೇಳೆ ಮಂಗಳವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಜಮೀನಿನ ಹಕ್ಕು ಬದಲಾವಣೆಗೆ ದಾಖಲೆಗಳನ್ನು ನೀಡಲು ಇವರು 8 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕೌಲ್ ಬಜಾರ್ ನಿವಾಸಿ ಅಮ್‌ಜದ್ ಎನ್ನುವವರು ಎಸಿಬಿಗೆ ದೂರು ನೀಡಿದ್ದರು. ಜಮೀನಿನ ದಾಖಲೆಗಳನ್ನು ಪಡೆಯಲು ಮುಂಗಡವಾಗಿ 50 ಸಾವಿರ ರೂ. ನೀಡುತ್ತಿದ್ದಾಗ ಎಸಿಬಿ ಅಧಿಕಾರಿಗಳು ಪರಸಪ್ಪರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದೆ.