ಕಾಂಗ್ರೆಸ್‌ನ ಹಣವನ್ನು ಜಿಲ್ಲೆಯ ಜನ ತಿರಸ್ಕರಿಸಿದ್ದಾರೆ, ಗೆಲುವು ನಮ್ಮದೆ: ಶ್ರೀರಾಮುಲು

ಬಳ್ಳಾರಿ: ಕಾಂಗ್ರೆಸ್ ಪಕ್ಷದ ನಾಯಕರು ನಾವು ಗೆಲ್ಲುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಹಣದಿಂದ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ನನ್ನ ಜಿಲ್ಲೆಯ ಜನ ಹಣವನ್ನು ತಿರಸ್ಕರಿಸಿದ್ದಾರೆ ಎಂದು ಮೊಳಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.

ನಮ್ಮ ಜಿಲ್ಲೆಯ ಜನ ನಮ್ಮನ್ನು ಕೈ ಬಿಡುವುದಿಲ್ಲ. ಶಾಂತ ಅವರು ಗೆಲ್ಲುವ ವಿಶ್ವಾಸ ಇದೆ. ಭ್ರಷ್ಟಾಚಾರದ ಹಣ ಅಥವಾ ಕಸಿದುಕೊಂಡಿರುವ ಹಣ ಇಲ್ಲಿ ಹಂಚುತ್ತಿದ್ದೀರಿ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಓದಿರೋರು. ನಾವು ಮನುಷ್ಯರನ್ನು ಓದಿದವರು. ಇವತ್ತು ಅವರ ಮನೆ, ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ ನೀಡಿದೆ. ಇದನ್ನು ಸುದ್ದಿ ಮಾಡಿದ್ದಕ್ಕೆ ಪತ್ರಕರ್ತರ ಮೇಲೆ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಪತ್ರಕರ್ತರ ಮೇಲೆ ದ್ವೇಷ ಸಾಧಿಸುತ್ತಿದ್ದೀರಿ ಅಂದ್ರೆ, ಬಳ್ಳಾರಿ ಜಿಲ್ಲೆಯ ಜನರನ್ನು ಬಿಡ್ತಿರಾ ಎಂದು ಕಿಡಿಕಾರಿದರು.

ಪತ್ರಕರ್ತರ ಮೇಲೆ ಈ ದ್ವೇಷ ಸರಿಯಲ್ಲ. ಅವರ ಕೆಲಸ ಮಾಡಲು ಬಿಡಬೇಕು. ಪ್ರಧಾನಿ ಅವರ ಕೈ ಬಲಪಡಿಸಲು ಶಾಂತಾರನ್ನು ಜನ ಗೆಲ್ಲಿಸುತ್ತಾರೆ. ಒಂಟಿಯಾಗಿದ್ದೀರಿ ಕಣದಲ್ಲಿ ಎಂಬ ವಿಚಾರಕ್ಕೆ ಮನುಷ್ಯ ಯಾರೋಬ್ಬರ ಮೇಲೆಯೂ ಅವಲಂಬಿಸಬಾರದು. ಹೋರಾಟ ಮಾಡಿದ್ದೇನೆ. ರಾಮುಲು ಮೇಲೆ ಜನರಿಗೆ ವಿಶ್ವಾಸ ಇದೆ. ಹಾಗಾಗಿ ನಾನು ಏಕಾಂಗಿ ಅಲ್ಲ ಎಂದು ಹೇಳಿದರು.

ನಿಧನ ನೋವು ತಂದಿದೆ

ಮಾಜಿ‌ ಶಾಸಕ ಎಂ.ಪಿ. ರವೀಂದ್ರ ಅವರ ನಿಧನದ ಸುದ್ದಿ ತುಂವಾ ನೋವಿನ ಸಂಗತಿ. ಎಂ.ಪಿ.ಪ್ರಕಾಶ್ ಅವರು ಸರಳ ಸಜ್ಜನಿಕೆಯ ವ್ಯಕ್ತಿ. ಅವರ ಮಗ ರವೀಂದ್ರ ಕೂಡ ಉತ್ತಮ ವ್ಯಕ್ತಿತ್ವ ಹೊಂದಿದವರು. ದಾವಣಗೆರೆ, ಬಳ್ಳಾರಿ ಜಿಲ್ಲೆಯ ಜನ ಅವರನ್ನು ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ‌ದುಃಖ ಭರಿಸುವ ಶಕ್ತಿ ನೀಡಲಿ. ನನಗೆ ಉತ್ತಮ ಸ್ನೇಹಿತರಾಗಿದ್ದರು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *