ಇಂದಿನಿಂದ ಹಾಕಿ ಟೂರ್ನ್‌ಮೆಂಟ್

ಬಳ್ಳಾರಿ : ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಬಳಿಯ ಹಾಕಿ ಕ್ರೀಡಾಂಗಣದಲ್ಲಿ ಜಿಲ್ಲಾ ಹಾಕಿ ಅಸೋಸಿಯೇಷನ್‌ವತಿಯಿಂದ ಡಿ.12 ರಿಂದ 15ರವರೆಗೆ ಅಂತರ ಜಿಲ್ಲಾ ಸಬ್ ಜೂನಿಯರ್ ಹಾಕಿ ಟೂರ್ನ್‌ಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಆರ್.ವಿ.ನಾಗರ್ಜುನ ರೆಡ್ಡಿ ತಿಳಿಸಿದರು.
ನಗರದ ಹಾಕಿ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉತ್ತರ ಕರ್ನಾಟಕವನ್ನು ಬಳ್ಳಾರಿ ಜೋನ್ ಒನ್ ಎಂಬುದಾಗಿ ವಿಭಾಗಿಸಿದೆ. ಈ ಜೋನ್‌ನಿಂದ ಧಾರವಾಡ, ಬೆಳಗಾವಿ, ರಾಯಚೂರು, ಬಾಗಲಕೋಟೆ, ಕಲ್ಬುರ್ಗಿ, ಹಾವೇರಿ, ಗದಗ, ಬಳ್ಳಾರಿ ಸೇರಿದಂತೆ ಎಂಟು ತಂಡಗಳು ಈ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲಿವೆ. ಲೀಗ್ ಹಾಗೂ ನಾಕೌಟ್ ಪದ್ಧತಿಯಲ್ಲಿ ಪಂದ್ಯಗಳು ನಡೆಯಲಿವೆ. ಡಿ.14 ಸೆಮಿ ಫೈನಲ್ ಹಾಗೂ ಡಿ.15 ರಂದು ಫೈನಲ್ ಪಂದ್ಯ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ವಿಜೇತರಾದವರು ಬೆಂಗಳೂರು ವಲಯದಲ್ಲಿ ಗೆದ್ದವರ ವಿರುದ್ಧ ಸೆಣಸಲಿದ್ದಾರೆ. ಒಟ್ಟಾರೆ ಹೊನಲು ಬೆಳಕಿನ ಒಟ್ಟು 15 ಪಂದ್ಯಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು. ಕ್ರೀಡಾ ಇಲಾಖೆ ಸಹಾಯಕಿ ನಿರ್ದೇಶಿಕಿ ಗ್ರೇಸಿ ಟೂರ್ನಮೆಂಟ್ ಉದ್ಘಾಟಿಸಲಿದ್ದಾರೆ. ಅರ್ಜುನ ಪ್ರಶಸ್ತಿ ಪುರಸ್ಕೃತ ವಿ.ಆರ್.ರಘುನಾಥ ಅತಿಥಿಗಳಾಗಿ ಫೈನಲ್ ಪಂದ್ಯದಲ್ಲಿ ಉಪಸ್ಥಿತರಲಿದ್ದಾರೆ ಎಂದರು.
ಪ್ರಮುಖರಾದ ಜಿಲ್ಲಾ ಹಾಕಿ ತಂಡದ ತರಬೇತುದಾರ ವೈ.ಎಂ.ಶ್ರೀಧರಬಾಬು, ವ್ಯವಸ್ಥಾಪಕ ಸಯ್ಯದ್ ಸೈಫುಲ್, ಕಾರ್ಯದರ್ಶಿ ಎಸ್.ಕೃಷ್ಣ ರೆಡ್ಡಿ, ಶಿವಾನಂದ, ಮಹೇಶ ಇದ್ದರು.
====

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…