ಕೇಂದ್ರದ ವಿರುದ್ಧ ಪ್ರತಿಭಟನೆಗೆಂದು ದೆಹಲಿಗೆ ತೆರಳಿದ್ದ ಬಳ್ಳಾರಿಯ 30 ರೈತರಿಗೆ ಸಂಕಷ್ಟ

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯ ರಾಮ್​ಲೀಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ ಬೃಹತ್​ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೆಂದು ಬಳ್ಳಾರಿಯಿಂದ ದೆಹಲಿಗೆ ತೆರಳಿದ್ದ 30 ಮಂದಿ ರೈತರು ರಾಜ್ಯಕ್ಕೆ ಬರಲಾಗದ ಸ್ಥಿತಿಗೆ ಸಿಲುಕಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 30 ಮಂದಿ ರೈತರು, ‘ನಂತರ ಕಾಶಿಗೆ ತೆರಳಿದ್ದರು. ಅಲ್ಲಿಂದ ಬಳ್ಳಾರಿಗೆ ಬರಲು ರೈಲು ಸೀಟ್​ ಬುಕ್​ ಮಾಡಿದ್ದರು. ಆದರೆ, ಬುಕ್​ ಮಾಡಿದ್ದ ರೈಲು ತಪ್ಪಿ ಹೋಗಿದೆ. ಇದ್ದ ಬದ್ದ ಹಣವನ್ನೆಲ್ಲ ಖಾಲಿ ಮಾಡಿಕೊಂಡಿರುವ ರೈತರು ಸದ್ಯ ತಮ್ಮೂರುಗಳಿಗೆ ಬರಲಾಗದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಹೀಗಾಗಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ ರೈತರು.