ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ

ಬಳ್ಳಾರಿ: ಅಂಗವಿಕಲರು ಎನ್ನುವುದಕ್ಕಿಂತ ಅವರನ್ನು ವಿಶೇಷ ಚೇತನರು, ದೈವಾನುಭೂತರು, ದೈವಾಂಗರು ಎಂದು ಕರೆಯಬೇಕು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

ನಗರದ ಪಾಲಿಕೆಯ ಆವರಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪಾಲಿಕೆ ಸಾಮಾನ್ಯ ನಿಧಿಯ ಶೇ.5ರ ಯೋಜನೆ ಹಾಗೂ ಜಿಲ್ಲಾಧಿಕಾರಿ ಅನುಮೋದಿತ ಕ್ರಿಯಾ ಯೋಜನೆಯಡಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದರು. ಈ ಯೋಜನೆಯಡಿ 29ಲಕ್ಷ ರೂ. ಮೊತ್ತದಲ್ಲಿ 43 ಫಲಾನುಭವಿಗಳಿಗೆ (ಐವರು ಮಹಿಳೆಯರು) ವಾಹನ ವಿತರಿಸಲಾಗುತ್ತಿದೆ. ಈ ವಾಹನವನ್ನು ಬಳಸಿಕೊಂಡು ಉತ್ತಮ ಜೀವನ ಸಾಗಿಸಬೇಕು. ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಸ್ವಯಂ ಪೇರಿತರಾಗಿ ಜೀವನ ನಡೆಸಬೇಕು ಎಂದರು.

ಪಾಲಿಕೆ ಮೇಯರ್ ಆರ್.ಸುಶೀಲಬಾಯಿ ಮಾತನಾಡಿದರು. ಮಾಜಿ ಉಪಮೇಯರ್ ಬೆಣಕಲ್ ಬಸವನಗೌಡ, ಸದಸ್ಯರಾದ ಪರೀವಿನ್ ಭಾನು, ಅಕ್ಬರ್ ಸಾಬ್, ನಾಗರಾಜ್ ಇತರರಿದ್ದರು.