ಬಳ್ಳಾರಿ ; ತಾಲೂಕಿನ ಬೊಬ್ಬುಕುಂಟೆ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63 ರಸ್ತೆಯನ್ನು ಸರ್ವಿಸ್ ರಸ್ತೆಯೊಂದಿಗೆ ವೈಜ್ಞಾನಿಕವಾಗಿ ನಿರ್ಮಿಸಬೇಕು ಎಂದು ಆಗ್ರಹಿಸಿ ಸುತ್ತಮುತ್ತಲಿನ ಜಮೀನುಗಳ ರೈತರು ಸೋಮವಾರ ಪ್ರತಿಭಟಿಸಿದರು.
ಹೊಸಪೇಟೆ-ಬಳ್ಳಾರಿ-ಗುತ್ತಿ ವರೆಗೆ ನಿರ್ಮಿಸಲಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 63 ರಸ್ತೆಯನ್ನು ತಾಲೂಕಿನ ಬೊಬ್ಬುಕುಂಟೆ ಗ್ರಾಮದ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪಕ್ಕದ ಮಂಗಮ್ಮಕ್ಯಾಂಪ್, ಇಬ್ರಾಹಿಂಪುರ ಸೇರಿ ಇನ್ನಿತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸರ್ವಿಸ್ ರಸ್ತೆ, ಕೆಳಸೇತುವೆಯೊಂದಿಗೆ ವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ಆದರೆ, ಬೊಬ್ಬುಕುಂಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮಾತ್ರ ಸರ್ವಿಸ್ ರಸ್ತೆಗಳನ್ನೇ ನಿರ್ಮಿಸದೆ, ಕೇವಲ 3.5 ಮೀಟರ್ ಎತ್ತರದಲ್ಲಿ ಕೆಳಸೇತುವೆ ನಿರ್ಮಿಸುವುದಾಗಿ ಗುತ್ತಿಗೆದಾರರು ಹೇಳುತ್ತಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು, ಗ್ರಾಮದಲ್ಲಿ ಬೆಳೆಯುವ ಬೆಳೆಗಳನ್ನು ಸಾಗಿಸುವ ವಾಹನಗಳಿಗೆ ತೊಂದರೆಯಾಗಲಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಳಂಬವಾಗುತ್ತಿರುವುದರಿಂದ ಧೂಳಿನಿಂದ ನಿರೀಕ್ಷಿತ ಫಸಲು ದೊರೆಯದೆ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮೇಲಾಗಿ ಪಕ್ಕದಲ್ಲೇ ತುಂಗಭದ್ರಾ ಬಲದಂಡೆಯ ಎಚ್‌ಎಲ್‌ಸಿ ಉಪಕಾಲುವೆ ಹಾದು ಹೋಗಿದ್ದು, ಕೆಳಸೇತುವೆ ನಿರ್ಮಾಣದಿಂದ ಮುಚ್ಚಿಹೋಗಿದೆ. ಪರಿಣಾಮ ನೀರೆಲ್ಲ ಹೊಲದಲ್ಲೇ ನಿಲ್ಲುತ್ತಿದ್ದು, ಭತ್ತ ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ.
ಬೊಬ್ಬುಕುಂಟೆ, ವಿಜಯಪುರ ಕ್ಯಾಂಪ್ ಸೇರಿ ಈ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಭತ್ತ, ಮೆಣಸಿನಕಾಯಿ ಬೆಳೆಯಲು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಕೇವಲ 3.5 ಮೀ. ಎತ್ತರದಲ್ಲಿ ಕೆಳಸೇತುವೆಯನ್ನು ನಿರ್ಮಿಸುವುದರಿಂದ ಮೆಣಸಿನಕಾಯಿ, ಭತ್ತ ತುಂಬಿದ್ದ ನೂರಾರು ಚೀಲಗಳನ್ನು ಹೊತ್ತ ಸರಕು ಸಾಗಾಣಿಕಾ ವಾಹನಗಳು ಸಂಚರಿಸಲು ತೊಂದರೆಯಾಲಿದೆ. ಆದ್ದರಿಂದ ಕೆಳಸೇತುವೆ ಬದಲಿಗೆ ರಾಷ್ಟ್ರೀಯ ರಸ್ತೆಯ ಎರಡು ಬದಿ ಕೇವಲ ಸರ್ವಿಸ್ ರಸ್ತೆ ನಿರ್ಮಿಸಿಕೊಟ್ಟರೆ, ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಹ ಸಂಬಂಧಪಟ್ಟ ಹೆದ್ದಾರಿ ಗುತ್ತಿಗೆದಾರರಿಗೆ ತಿಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಆಗ್ರಹ
You Might Also Like
ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic
garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…
ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups
Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…
18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs
Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…