ಕಾಲೇಜಿನ ಸಮವಸ್ತ್ರ ಬದಲಾವಣೆಗೆ ಆಗ್ರಹ

ಬಳ್ಳಾರಿ: ಪ್ಯೂಪಿಲ್ ಟ್ರೀ ಕಾಲೇಜು ವಿದ್ಯಾರ್ಥಿನಿಯರ ಸಮವಸ್ತ್ರ ಬದಲಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾಂಸ್ಕೃತಿಕ ನಾಡು ದೇಶದ ಪರಂಪರೆಯ ಬೀಡಾಗಿದೆ. ಶಾಲಾ, ಕಾಲೇಜುಗಳು ಜ್ಞಾನದ ದೇಗುಲಗಳಾಗಿವೆ. ಇಂತಹದರ ಮಧ್ಯೆ ಪಾಶ್ಚಾತ್ಯ ಸಂಸ್ಕ್ರತಿಯನ್ನು ಬಿಂಬಿಸುವಂತೆ ಸಮವಸ್ತ್ರಗಳನ್ನು ವಿದ್ಯಾರ್ಥಿನಿಯರು ಧರಿಸುವುದು ಖಂಡನೀಯ. ಸಮವಸ್ತ್ರ ಬದಲಿಸುವಂತೆ ಮನವಿ ಮಾಡಿಕೊಂಡರೂ ಕಾಲೇಜಿನ ಆಡಳಿತ ಮಂಡಳಿ ಕೇಳುತ್ತಿಲ್ಲ. ಹಾಗಾಗಿ, ಕೂಡಲೇ ಸಮವಸ್ತ್ರ ಬದಲಿಸುವಂತೆ  ಕಾಲೇಜು ಆಡಳಿತ ಮಂಡಳಿಗೆ ಸೂಚಿಸಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು. ಈ ವೇಳೆ ಡಿಸಿ ಕಚೇರಿಗೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಮ್ ಎಬಿವಿಪಿ ಕಾರ್ಯಕರ್ತರ ಮನವಿ ಸ್ವೀಕರಿಸಿದರು.