25.8 C
Bangalore
Monday, December 9, 2019

ಬೆಳ್ಳಾರೆ ಶಾಲೆಗೆ 362 ಮಕ್ಕಳು ದಾಖಲು

Latest News

ಹುಣಸೂರಿನಲ್ಲಿ ಹಳ್ಳಿಹಕ್ಕಿಗೆ ಮನೆ ಗೂಡಿನ ದಾರಿ ತೋರಿದ ಎಚ್.ಪಿ.ಮಂಜುನಾಥ್

ಹುಣಸೂರು: ಹಳ್ಳಿಹಕ್ಕಿ ಎಚ್​​.ವಿಶ್ವನಾಥ್ ಕಾಂಗ್ರೆಸ್​ ಅಭ್ಯರ್ಥಿ ಎಚ್​​.ಪಿ ಮಂಜುನಾಥ್ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಎಚ್​.ಪಿ ಮಂಜುನಾಥ್, ಜಿಜೆಪಿಯ ಎಚ್​....

ಉಪ ಚುನಾವಣೆ ಗೆಲುವಿಗೆ ವಿಜಯೋತ್ಸವ – ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ವಿತರಣೆ ಬಣ್ಣ ಎರಚಿ ಸಂಭ್ರಮ

ಬಳ್ಳಾರಿ: ವಿಜಯನಗರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ 30125 ಮತಗಳ ಅಂತರದಿಂದ ಗೆಲ್ಲುತ್ತಿದ್ದಂತೆ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನ ಮತ...

ಲಸಿಕೆ ಹಾಕಿಸಿ ಕಾಯಿಲೆಗಳಿಂದ ಮಕ್ಕಳ ರಕ್ಷಿಸಿ

ನಾಯಕನಹಟ್ಟಿ: ಡಿಪಿಟಿ, ಡಿಟಿ ಲಸಿಕಾ ಅಭಿಯಾನ ಡಿ.11ರಿಂದ ಆರಂಭಗೊಳ್ಳಲಿದೆ ಎಂದು ಹಿರಿಯ ಆರೋಗ್ಯ ಮೇಲ್ವಿಚಾರಕ ಶೇಷಾದ್ರಿ ತಿಳಿಸಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ...

ಬೈ ಎಲೆಕ್ಷನ್​ ರಿಸಲ್ಟ್​ | ಜಿದ್ದಾಜಿದ್ದಿನ ಯಶ ಬಿಜೆಪಿ ಪಾಲು; ರೆಬೆಲ್​ ಶಾಸಕ ಸೋಮಶೇಖರ್​ಗೆ ಒಲಿದ ಯಶವಂತಪುರ

ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಮತ ಎಣಿಕೆಯ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ರಾಜ್ಯದ ಗಮನ ಸೆಳೆದಿತ್ತು. ಕೊನೆಗೆ ಬಿಜೆಪಿಯ ಎಸ್​.ಟಿ. ಸೋಮಶೇಖರ್​ 1,44,722 ಮತ ಪಡೆದು ಜಯಶಾಲಿಯಾಗಿದ್ದಾರೆ. ಚುನಾವಣೆ ಘೋಷಣೆಯಾದಗಿನಿಂದಲೂ...

ಕೊಟ್ಟೂರಲ್ಲಿ ಕ್ಲೀನ್ ರಸ್ತೆಗೆ ಮುಂದಾದ ಪಪಂ

ಕೊಟ್ಟೂರು: ಧೂಳು ಮುಕ್ತ ಪಟ್ಟಣವನ್ನಾಗಿಸಲು ಸ್ಥಳೀಯ ಪಪಂ ನಿತ್ಯ ರಸ್ತೆ ಬದಿಯ ನುಸಿ ಮಣ್ಣನ್ನು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುತ್ತಿದೆ. ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ...

ಬಾಲಚಂದ್ರ ಕೋಟೆ ಬೆಳ್ಳಾರೆ

ಬೆಳ್ಳಾರೆಯ ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಸಂಸ್ಥೆ ಇದೀಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಬದಲಾವಣೆಗೊಂಡಿದೆ. ಸರ್ಕಾರದ ಆದೇಶದಂತೆ 2019-20ನೇ ಶೈಕ್ಷಣಿಕ ವರ್ಷದಿಂದ ಒಂದೇ ಸ್ಥಳದಲ್ಲಿ ಎಲ್.ಕೆ.ಜಿ, ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಒಟ್ಟುಗೂಡಿಸಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿಸಲಾಗಿದೆ.

ಈ ಶೈಕ್ಷಣಿಕ ವರ್ಷದಿಂದಲೇ ಪೂರ್ವ ಪ್ರಾಥಮಿಕ ಶಿಕ್ಷಣದಡಿಯಲ್ಲಿ ಎಲ್.ಕೆ.ಜಿ ಮತ್ತು 1ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಆರಂಭಗೊಂಡಿದ್ದು, ವಿವಿಧ ತರಗತಿಗೆ ಒಟ್ಟು 362 ಮಕ್ಕಳು ಸೇರ್ಪಡೆಯಾಗಿದ್ದಾರೆ. ಶಿಕ್ಷಕರನ್ನು ನುರಿತರ ಮೂಲಕ ತರಬೇತಿಗೊಳಿಸಿ ಸಜ್ಜುಗೊಳಿಸಲಾಗಿದೆ.

ಸುತ್ತಮುತ್ತಲಿನ ತಾಲೂಕಿನ ಕೆಪಿಎಸ್ ಶಾಲೆಗಳಿಗೆ ಹೋಲಿಸಿದರೆ ಬೆಳ್ಳಾರೆಯ ಶಾಲೆಗೆ ಉತ್ತಮ ದರ್ಜೆಯ ಹಲವು ವ್ಯವಸ್ಥೆಗಳು ಇದೆ. ತರಗತಿಗಳಿಗೆ ಗುಣಮಟ್ಟದ ಕಟ್ಟಡಗಳ ವ್ಯವಸ್ಥೆಯಿದೆ. ವಿದ್ಯಾರ್ಥಿಗಳಿಗೆ ಜೀವದಲ್ಲಿ ಉಪಯುಕ್ತವಾಗುವ ವಿಶೇಷ ವೃತ್ತಿ ಕೌಶಲ ತರಬೇತಿ, ಈ ವರ್ಷದಿಂದ 9ನೇ ತರಗತಿ ವಿದ್ಯಾರ್ತಿಗಳಿಗೆ ತೃತೀಯ ಭಾಷೆಯಾಗಿ ಬಾಲಕರಿಗೆ ಜೆ.ಒ.ಸಿ ಮತ್ತು ಬಾಲಕಿಯರಿಗೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಆರಂಭಿಸಲಾಗುತ್ತಿದೆ. ವಿಶೇಷವೆಂದರೆ ಈ ಶಾಲೆಯಲ್ಲಿ ಏಕಕಾಲಕ್ಕೆ 4 ಸ್ಮಾರ್ಟ್ ಕ್ಲಾಸ್‌ಗಳನ್ನು ನಡೆಸುವಷ್ಟು ಸೌಲಭ್ಯಗಳಿವೆ. 12ಮಂದಿ ಕಾಯಂ ಹಾಗೂ 2 ಮಂದಿ ಪ್ರಭಾರದಂತೆ ಒಟ್ಟು 14 ಶಿಕ್ಷಕರನ್ನು ಶಾಲೆ ಹೊಂದಿದೆ. ವಿಸ್ತಾರವಾದ ಕ್ರೀಡಾಂಗಣ ಶಾಲೆಯ ಆವರಣದೊಳಗಿದೆ.

ಆಗಬೇಕಾದ ಸೌಲಭ್ಯ: ಇನ್ನು ಸಣ್ಣಪುಟ್ಟ ಸುಧಾರಣೆಗಳು, ವ್ಯವಸ್ಥೆಗಳು ಬೆಳ್ಳಾರೆ ಕೆಪಿಸ್ ಶಾಲೆಗೆ ಆಗಬೇಕಿದೆ. ಪೈಂಟಿಂಗ್, ಹಲವು ದುರಸ್ತಿ ಕಾರ್ಯ ಸೇರಿದಂತೆ ಅನೇಕ ಸುಧಾರಣೆ ಕೆಲಸಗಳು ಇನ್ನೂ ನಡೆಯಬೇಕಿದೆ. ಕಳೆದ ವರ್ಷದ ಅನುದಾನದಲ್ಲಿ 5ಲಕ್ಷ ನಿರ್ವಹಣೆ ಹಾಗು 12 ಲಕ್ಷ ರೂ. ಇತರ ಸವಲತ್ತಿಗೆ ಒಟ್ಟು 17 ಲಕ್ಷ ರೂ. ಕಳೆದ ಬಾರಿ ಬೆಳ್ಳಾರೆ ಶಾಲೆಗೆ ದೊರೆತಿತ್ತು. ಆದರೆ ಈ ಬಾರಿ ನಿರ್ವಹಣಾ ಅನುದಾನ 5 ಲಕ್ಷ ಮಾತ್ರ ದೊರೆತಿದೆ.

ಶಾಲೆ ಈಗ ದಾನಿಗಳ ಹುಡುಕಾಟದಲ್ಲಿದ್ದು, ಕೊಡುಗೆ ರೂಪದಲ್ಲಿ ಶಾಲೆಗೆ ಅಗತ್ಯವಿರುವ ಮರದ ಪೀಠೋಪಕರಣದ ನಿರೀಕ್ಷೆಯಲ್ಲಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ರಾತ್ರಿ ಪಾಳಿ ಕಾವಲಿಗೆ ಹೋಮ್‌ಗಾರ್ಡ್ ಅಗತ್ಯವಿದ್ದು, ಎಸ್‌ಡಿಎಂಸಿ ವತಿಯಿಂದ ಈಗಾಗಲೆ ಪೊಲೀಸ್ ಇಲಾಖೆಗೆ ಮನವಿ ನೀಡಲಾಗಿದೆ.

ದಾಖಲಾತಿ ಪ್ರಮಾಣ
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಈ ವರ್ಷ ಎಲ್.ಕೆ.ಜಿಯಲ್ಲಿ 40 ಮಕ್ಕಳು, 1ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 61, ಕನ್ನಡ ಮಾಧ್ಯಮಕ್ಕೆ 3 ಮಕ್ಕಳು, 2ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 47, 3ನೇ ತರಗತಿಗೆ 42ಮಕ್ಕಳು, 4ನೇ ತರಗತಿಗೆ 43 ಮಕ್ಕಳು, 5ನೇ ತರಗತಿಯ ಕನ್ನಡ ಮಾಧ್ಯಮಕ್ಕೆ 49 ಮಕ್ಕಳು, 6ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 21 ಮತ್ತು ಕನ್ನಡ ಮಾಧ್ಯಮಕ್ಕೆ 61ಮಕ್ಕಳು ಮಕ್ಕಳು ಸೇರಿದಂತೆ ಒಟ್ಟು 362 ಮಕ್ಕಳು ದಾಖಲಾಗಿದ್ದಾರೆ. ಇನ್ನಷ್ಟೂ ಮಕ್ಕಳು ದಾಖಲಾತಿ ಪಡೆದುಕೊಳ್ಳಲು ಬಾಕಿಯಿದೆ.

ಶಾಲೆಯು ಉತ್ತಮ ದಾಖಲಾತಿ ಪಡೆದಿದೆ. ಖಾಸಗಿ ಶಾಲೆಗಳಿಗೆ ಸಮಾನವಾದ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಯೂ ನೀಡುತ್ತದೆ ಎಂಬುದನ್ನು ತೋರಿಸಲು ಕೆಪಿಎಸ್ ಪದ್ಧತಿ ಒಂದು ಉತ್ತಮ ಯೋಜನೆ
-ಉಮಾಕುಮಾರಿ ಮುಖ್ಯ ಶಿಕ್ಷಕಿ,  ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ

Stay connected

278,751FansLike
584FollowersFollow
622,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...