ರಿಷಬ್​ ಶೆಟ್ಟಿ ಅಭಿನಯದ ‘ಬೆಲ್​ ಬಾಟಂ’ ಟೀಸರ್​ ರಿಲೀಸ್

ಬೆಂಗಳೂರು: ಕನ್ನಡದ ಸಿನಿ ಪ್ರೇಕ್ಷಕರಿಗೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು-ರಾಮಣ್ಣ ರೈ ಕೊಡುಗೆ’ ಚಿತ್ರದ ಮೂಲಕ ಭರ್ಜರಿ ರಸದೌತಣ ಉಣಬಡಿಸಿದ್ದ ನಿರ್ದೇಶಕ ರಿಷಬ್​ ಶೆಟ್ಟಿ ‘ಬೆಲ್ ಬಾಟಂ’ ಹಾಕಿಕೊಂಡು ನಾಯಕನಾಗಿ ಸಿನಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಿದ್ಧರಾಗಿದ್ದಾರೆ.

ಹೌದು, ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಂ ಚಿತ್ರದ ಟೀಸರ್ ಶುಕ್ರವಾರ ರಿಲೀಸ್ ಆಗಿದ್ದು, ಡಿಟೆಕ್ಟಿವ್​ ದಿವಾಕರ್​ ಪಾತ್ರದಲ್ಲಿ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಹರಿಪ್ರಿಯಾ ಚಿತ್ರದ ನಾಯಕಿಯಾಗಿ ಅಭಿನಯಿಸಿರುವ ಬೆಲ್​ ಬಾಟಂ ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲಿದೆ.

ಜಯತೀರ್ಥ ಚಿತ್ರ ನಿರ್ದೇಶನ ಮಾಡಿದ್ದು, ವಿಭಿನ್ನ ಕಥಾವಸ್ತು ಹೊಂದಿರುವ ಬೆಲ್​ ಬಾಟಂ ಟೀಸರ್​ ಬಿಡುಗಡೆಯಾದ ಎರಡು ಗಂಟೆಗಳಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ.

ಬೆಲ್​ಬಾಟಂ ಬಳಗ ಸೇರಿದ ಹರಿಪ್ರಿಯಾ

ಬೆಲ್ ಬಾಟಂ ಪತ್ತೇದಾರಿಕೆ