24.9 C
Bangalore
Wednesday, December 11, 2019

ನಂಬಿದರೆ ನಂಬಿ ಬಿಟ್ಟರೆ ಬಿಡಿ ! ವಿಶ್ವದರ್ಜೆಯ ಈ ಬ್ಯಾಟ್ಸ್​​ಮನ್​​ಗಳು ಐಪಿಎಲ್​ ಹರಾಜಿನಲ್ಲಿ ಸೇಲಾಗಿರಲಿಲ್ಲ

Latest News

ವಿಷ್ಣು‌ ಸೇನಾ‌ ಸಮಿತಿಯಿಂದ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಆಯೋಜನೆ

ಬಳ್ಳಾರಿ: ಚಿತ್ರನಟ ವಿಷ್ಣುವರ್ಧನ್ ಅವರ 10ನೇ ಪುಣ್ಯಸ್ಮರಣೆ ಹಿನ್ಮೆಲೆಯಲ್ಲಿ ವಿಷ್ಣು ಸೇನಾ ಸಮಿತಿಯಿಂದ ಡಿ.29ರಂದು ನಗರ ಹಾಗೂ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.29ರಂದು...

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ಪೌರತ್ವ ತಿದ್ದುಪಡಿ ಮಸೂದೆ ದೇಶದ ಈಶಾನ್ಯ ಭಾಗದ ಜನರ ಮೇಲಿನ ಕ್ರಿಮಿನಲ್​ ದಾಳಿ: ರಾಹುಲ್​ ಗಾಂಧಿ ಟೀಕೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟೀಕಿಸಿದ್ದು, ದೇಶದ...

ಐಪಿಎಲ್ ಹರಾಜು ವರ್ಷದ ಬಹುನಿರೀಕ್ಷಿತ ಘಟನೆಗಳಲ್ಲಿ ಒಂದಾಗಿದೆ. ಅಂದು ಕೆಲವು ಕ್ರಿಕೆಟಿಗರಿಗೆ ಅದೃಷ್ಟ ಕುಲಾಯಿಸಿದರೆ ಇನ್ನು ಕೆಲವರು ನತದೃಷ್ಟರಾಗಿ ಉಳಿಯುತ್ತಾರೆ. ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಪರಿಚಯವೇ ಇಲ್ಲದ ಕೆಲವರು ಬಹುದೊಡ್ಡ ಮೊತ್ತಕ್ಕೆ ಸೇಲಾಗಿ ಅಚ್ಚರಿ ಮೂಡಿಸಿದ್ದಾರೆ. ಸಾಕಷ್ಟು ಪ್ರತಿಭೆ ಇದ್ದರೂ ಒಂದು ಕಾಲದಲ್ಲಿ ಐಪಿಎಲ್​ನಲ್ಲಿ ಸೇಲಾಗದ ವಿಶ್ವದರ್ಜೆಯ ಮೂವರು ಆಟಗಾರರ ಬಗ್ಗೆ ತಿಳಿಯೋಣ.

1) ಕ್ರಿಸ್​ ​ಗೇಲ್:

ವೆಸ್ಟ್​​ ಇಂಡೀಸ್​​ನ ಈ ದೈತ್ಯ ಕ್ರಿಕೆಟಿಗ ಐಪಿಎಲ್​ ಆರಂಭದ ಮೊದಲ ಮೂರು ವರ್ಷ ಕೋಲ್ಕಯಾ ನೈಟ್​​​ರೈಡರ್ಸ್(ಕೆಕೆಆರ್) ಅನ್ನು ಪ್ರತಿನಿಧಿಸಿದ್ದರು. ನಂತರ 2011 ಐಪಿಎಲ್​ ಹರಾಜಿನಲ್ಲಿ ದೊಡ್ಡಮೊತ್ತಕ್ಕೆ ಸೇಲಾಗಬಹುದು ಎಂದು ಭಾವಿಸಿದ್ದರು. ಅಚ್ಚರಿ ಎಂಬಂತೆ ಯಾವ ಪ್ರಾಂಚೈಸಿಯೂ ಗೇಲ್​ ಅವರನ್ನು ಖರೀದಿಸಿರಲಿಲ್ಲ. ಟೂರ್ನಿ ಆರಂಭದ ನಂತರ ಆರ್​​ಸಿಬಿಯಿಂದ ವೇಗದ ಬೌಲರ್ ಡರ್ಕ್​ ನ್ಯಾನಿಸ್​​ ಹೊರಬಿದ್ದ ನಂತರ ಆರ್​​ಸಿಬಿ ಗೇಲ್ ​ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತ್ತು.

ಆ ಸೀಸನ್​ನಲ್ಲಿ ಗೇಲ್​ 67.55 ಸರಾಸರಿ ಮತ್ತು 183.13 ಸ್ಟ್ರೈಕ್​ ರೇಟ್​​ನಲ್ಲಿ 608 ರನ್​ ಗಳಿಸಿ ಮಿಂಚಿದ್ದರು. ನಂತರದ ಎರಡು ಸೀಸನ್​ಗಳಲ್ಲಿ 733 ಮತ್ತು 708 ರನ್​ಗಳಿಸಿದ್ದರು. ನಂತರದ ನಾಲ್ಕು ಸೀಸನ್​ಗಳಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ್ದರು.
2018 ಹರಾಜಿನಲ್ಲಿ ಆರ್​ಸಿಬಿ ಗೇಲ್​ ಅವರನ್ನು ಕೈಬಿಟ್ಟಿತು. ಮೊದಲೆರಡು ರೌಂಡ್ಸ್​​ನಲ್ಲಿ ಸೇಲಾಗದೇ ಉಳಿದಿದ್ದ ಗೇಲ್, ಮೂರನೇ ರೌಂಡ್​​ನಲ್ಲಿ ಕಿಂಗ್ಸ್​​ ಇಲೆವೆನ್ ಪಂಜಾಬ್ ಪಾಲಾದರು. 

2) ಸ್ಟಿವೆನ್​ ಸ್ಮಿತ್:

ಅಂತಾರಾಷ್ಟ್ರೀಕಯ ಕ್ರಿಕೆಟ್​​ನಲ್ಲಿ ರನ್​ಹೊಳೆ ಹರಿಸುತ್ತಿರುವ ಆಸ್ಟ್ರೇಲಿಯಾದ ಈ ಪ್ರತಿಭಾವಂತ ಆಟಗಾರ ಒಮ್ಮೆ ಐಪಿಎಲ್ ಹರಾಜಿನಲ್ಲಿ ಸೇಲಾಗಿರಲಿಲ್ಲ ಎಂದರೆ ನಂಬಲೇ ಬೇಕು. ರಾಜಸ್ತಾನ್ ರಾಯಲ್ಸ್​​ ತಂಡದ ನಾಯಕನಾಗಿರುವ ಸ್ಮಿತ್ 2012 ಐಪಿಎಲ್ ಹರಾಜಿನಲ್ಲಿ ಸೇಲಾಗಿರಲಿಲ್ಲ. ಆದರೆ ಮಿಷೆಲ್ ಮಾರ್ಷ್​ ಗಾಯದಿಂದಾಗಿ ಬದಲಿ ಆಟಗಾರನಾಗಿ ಪುಣೆ ವಾರಿಯರ್ಸ್​ ತಂಡ ಸೇರಿದರು.

ಆ ಸೀಸನ್​ನಲ್ಲಿ 362 ರನ್​ಗಳಿಸಿದ್ದರು. ನಂತರ ರಾಜಸ್ತಾನ ರಾಯಲ್ಸ್​ ಸೇರಿದ ಸ್ಮಿತ್ ತಂಡದ ಆಧಾರ ಸ್ಥಂಭವಾಗಿದ್ದಾರೆ. 2015 ರಿಂದ ಎರಡು ವರ್ಷ ಆರ್​​ ಆರ್​​ ತಂಡದ ನಾಯಕತ್ವ ವಹಿಸಿದ್ದರು.

3) ಹಾರ್ದಿಕ್ ಪಾಂಡ್ಯ:

2013 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಹಾರ್ದಿಕ್ ಪಾಂಡ್ಯ ಕಾಲಿಟ್ಟರೂ, ಮುಂಬೈ ಇಂಡಿಯನ್ಸ್​​ ಖರೀದಿಸುವವರೆಗೆ ಪಾಂಡ್ಯ ಯಾರು ಎಂಬುದು ಯಾರೊಬ್ಬರಿಗೂ ತಿಳಿದಿರಲಿಲ್ಲ. ಪಾಂಡ್ಯರನ್ನು ಎಂಐ 10 ಲಕ್ಷ ರೂ ಮೂಲ ಬೆಲೆಗೆ ಖರೀಸಿತ್ತು. ಆ ಸೀಸನ್​ನಲ್ಲಿ 180.64 ಸ್ಟ್ರೈಕ್ ರೇಟ್​​ನಲ್ಲಿ 112 ರನ್​ಗಳಿಸಿದಾಗ ರಾಷ್ಟ್ರೀಯ ತಂಡದ ಸೆಲೆಕ್ಟರ್​ಗಳ ಕಣ್ಣಿಗೆ ಬಿದ್ದರು. 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೂ ಆಯ್ಕೆಯಾದರು.

ಇದೆಲ್ಲಾ ನಡೆಯುವುದಕ್ಕೂ ಒಂದು ವರ್ಷ ಮುನ್ನ ಹಾರ್ದಿಕ್ ಪಾಂಡ್ಯರನ್ನು ಯಾರೊಬ್ಬರೂ ಖರೀದಿಸಿರಲಿಲ್ಲ. ಇದೀಗ ಮುಂಬೈ ಇಂಡಿಯನ್ಸ್​​ನ ಬೆನ್ನೆಲುಬಾಗಿ ಪಾಂಡ್ಯ ಗುರುತಿಸಿಕೊಂಡಿದ್ದಾರೆ. 2018 ರಲ್ಲಿ 11 ಕೋಟಿ ವೆಚ್ಚ ಮಾಡಿದ ಮುಂಬೈ ಇಂಡಿಯನ್ಸ್​​ ಪಾಂಡ್ಯರನ್ನು ರೀಟೈನ್ ಮಾಡಿಕೊಂಡಿತ್ತು.

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...