More

    ರಾಮತೀರ್ಥನಗರ ಅಭಿವೃದ್ಧಿಗಾಗಿ ಪ್ರಾದೇಶಿಕ ಆಯುಕ್ತರಿಗೆ ಮನವಿ

    ಬೆಳಗಾವಿ : ಇಲ್ಲಿನ  ರಾಮತೀರ್ಥನಗರದಲ್ಲಿ ರಸ್ತೆ, ಗಟಾರು,  ಅಧ್ಯಯನ ಭವನ , ಬೀದಿ ದೀಪಗಳು, ಕಸ ನಿರ್ವಹಣೆ,  ಒಳ ಚರಂಡಿ, ನಿರ್ಮಾಣ ಸೇರಿದಂತೆ ಇತರ ಮೂಲಭೂತ ಸೌಲಭ್ಯ ಗಳ ಸಮರ್ಪಕ ಪೂರೈಕೆಗಾಗಿ ಒತ್ತಾಯಿಸಿ ರಾಮತೀರ್ಥನಗರ ಸ್ನೇಹ ಸಮಾಜ ಸೇವಾ ಸಂಘ. ಹಾಗೂ  ಕುಂದರನಾಡ ರಹವಾಸಿಗಳ ಸಂಘದ ವತಿಯಿಂದ ಬೆಳಗಾವಿ ಪ್ರಾದೇಶಿಕ ಆಯುಕ್ತ. ಎಂ. ಜಿ.ಹಿರೇಮಠ ಅವರಿಗೆ ಮಂಗಳವಾರ ಸಲ್ಲಿಸಲಾಯಿತು.


    ಮನವಿಗೆ ಸ್ಪಂದಿಸಿದ ಹಿರೇಮಠ ಅವರು ತಕ್ಷಣ ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಎಲ್ಲ ಸಮಸ್ಯೆಗಳ ಇತ್ಯರ್ಥಕ್ಕೆ ಸ್ಪಂದಿಸಿ ಯೋಜನೆಗಳನ್ನು ಕೈಗೊಳ್ಳುವಂತೆ  ಆದೇಶಿಸಿದರು.  ಇದೇ ಸಂದರ್ಭದಲ್ಲಿ ಬೆಳಗಾವಿ-ಗೋಕಾಕ ಮುಖ್ಯ ರಸ್ತೆಯ ರಾಮತೀರ್ಥನಗರದ ಆಂಜನೇಯ ದೇವಸ್ಥಾನ ಬಳಿಯ ಗಟಾರು ಕೊಳವೆ ಪೈಪ್‌ಅನ್ನು ಖಾಸಗಿ ಸಂಸ್ಥೆಯ ಮಾಲೀಕರು ಮಣ್ಣು, ಕಲ್ಲುಗಳಿಂದ ಮುಚ್ಚಿ ದ್ದರಿಂದಾಗಿ ಗಟಾರು ನೀರು ಮುಖ್ಯ ರಸ್ತೆಯ ಮೇಲೆ ಹರಿಯುತ್ತಿದ್ದು, ತಪ್ಪಿಸ್ಥರ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದರು.


    ನಗರ ಕುಂದರನಾಡ ರಹವಾಸಿಗಳ ಸಂಘದ ಅಧ್ಯಕ್ಷ ರಾದ ಎನ್.ಬಿ.ನಿರ್ವಾಣಿ ಮಾತನಾಡಿ, ರಾಮತೀರ್ಥ ನಗರದಲ್ಲಿ ಹಲವಾರು  ಸಮಸ್ಯೆಗಳಿದ್ದು, ಹಲವಾರು ಬಾರಿ ಮನವಿಗಳನ್ನು ಕೊಡುತ್ತಲೇ ಬಂದಿದ್ದೇವೆ. ಇವುಗಳಿಗೆ ಸ್ಪಂದಿಸಿ ಪ್ರಾಮಾಣಿಕ ಕೆಲಸ ಮಾಡುವ ಅಧಿಕಾರಿ ವರ್ಗವಿಲ್ಲ. ಇದು ಸುಧಾರಣೆಯಾಗಬೇಕು ಎಂದು ಅಳಲು ತೋಡಿಕೊಂಡರು.


    ಸ್ನೇಹ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಉಪಾಧ್ಯಕ್ಷ ಎಸ್.ಜಿ.ಕಲ್ಯಾಣಿ, ಪದಾಧಿಕಾರಿಗಳಾದ ಬಸವರಾಜ ಗೌಡಪ್ಪಗೋಳ, ಎಸ್.ಎಲ್.ಸನದಿ, ಈರಪ್ಪ ಹಾಲಭಾವಿ, ದಿಕ್ಷೀತ ಮಲ್ಹಾರ, ಅಶೋಕ ಖಡಬಡಿ, ಹುನ್ನೂರ,  ದುಂಡಪ್ಪಾ  ಉಳ್ಳೇಗಡ್ಡಿ,  ಮಹೇಶ ಚಿಟಗಿ ಸೇರಿದಂತೆ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts