ಪುರಸಭೆ ಮುಖ್ಯಾಧಿಕಾರಿ ಮನೆಗೆ ಕನ್ನ

ಚಿಕ್ಕೋಡಿ: ಸಿನಿಮಯ ರೀತಿಯಲ್ಲಿ ಹಾಡು ಹಗಲೇ ಪುರಸಭೆ ಮುಖ್ಯಾಧಿಕಾರಿ ಮನೆಗೆ ಕನ್ನ ಹಾಕಲು ಬಂದಿದ್ದ ಖದೀಮರು ಕದ್ದಿದ್ದ ಮಾಲ್ ಸಮೇತ ಸಿಕ್ಕಿಬಿದ್ದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ನಡೆದಿದೆ.

ಪಟ್ಟಣದ ಪಠಾಣ ದಾಬಾ ಹತ್ತಿರವಿರುವ ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ ಮನೆಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿದ ಕಳ್ಳರು ಪುರಸಭೆ ಸಿಬ್ಬಂದಿ ವೇಷ ಧರಿಸಿ ಕಳ್ಳತನ ಮಾಡಲು ಬಂದಿದ್ದಾರೆ.

ಮನೆಯ ಬೀಗ ಒಡೆದು ಮೆನೆಯಲ್ಲಿದ್ದ ಅಲ್ಪ ಪ್ರಮಾಣದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೊರಗೆ ಹೋಗುವ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮನೆಗೆ ವಾಪಸ್ ಆಗಿದ್ದು, ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ಕದ್ದ ಮಾಲ್ ಸಮೇತ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನೊಬ್ಬ ಕಳ್ಳ ಮನೆಯ ಪಕ್ಕದ ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿದ್ದನ್ನು ಗಮನಿಸಿದ ಪುರಸಭೆ ಮುಖ್ಯಾಧಿಕಾರಿ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಚಿಕ್ಕೋಡಿ ಪೊಲೀಸರು, ಇಬ್ಬರು ಖದೀಮರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದೆ.