ಸಿನಿಮಾ

ಕಾಂಗ್ರೆಸ್‌ನ ಸೇಠ್ ಬೆಂಗಲಿಗರ ಸಂಭ್ರಮಾಚರಣೆಯಲ್ಲಿ ಪಾಕ್ ಪರ ಘೋಷಣೆ..?

ಬೆಳಗಾವಿ : ನಗರದಲ್ಲಿನ ಮತ ಎಣಿಕೆ ಕೇಂದ್ರ ಆರ್‌ಪಿಡಿ ಮಹಾವಿದ್ಯಾಲಯದ ಹೊರಗೆ ಬೆಳಗಾವಿ ಉತ್ತರ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿಯ ವಿಜಯೋತ್ಸವದಲ್ಲಿ ಕಿಡಿಗೇಡಿಗಳು ‘ಪಾಕಿಸ್ತಾನ ಜಿಂದಾಬಾ ಎಂದು ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 ಆರ್‌ಪಿಡಿ ವೃತ್ತದಲ್ಲಿ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಮಾಡಲು ಸೇರಿದ್ದ ಜನರ ಗುಂಪಿನಲ್ಲಿ ಕೆಲವರು ‘ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಅಶಾಂತಿ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಿದ್ದು, ಮಾಹಿತಿ ತಿಳಿದ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರು, ಈ ಬಗ್ಗೆ ತಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ. ಕಳೆದ ಬಾರಿಯ 2018ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಫಿರೋಜ್ ಸೇಠ್ ಪ್ರಚಾರ ಸಂದರ್ಭದಲ್ಲಿಯೂ ಕಿಡಿಗೇಡಿಗಳು ‘ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಆಚುನಾವಣೆಯಲ್ಲಿ ಫಿರೋಜ್ ಸೇಠ ಸೋತಿದ್ದರು. ಇದೀಗ ಅವರ ಸಹೋದರ ರಾಜು ಗೆಲುವಿನ ಸಂಭ್ರಮದಲ್ಲೂ ಅಂತಹದೆ ಘಟನೆ ಮರುಕಳಿಸಿರುವುದು ಆತಂಕ ತಂದಿದೆ.

Latest Posts

ಲೈಫ್‌ಸ್ಟೈಲ್