ಅಪರಿಚಿತರ ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

ಹುಕ್ಕೇರಿ: ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯ ದಾದಬಾನಟ್ಟಿ ಬಳಿ ಮತ್ತು ಹತ್ತರಗಿ ಗ್ರಾಮದ ಕೃಷಿ ಸೇವಾ ಕೇಂದ್ರದ ಎದುರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಅಪರಿಚಿತರು ಮೃತಪಟ್ಟಿದ್ದು, ಅವರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ದಾದಬಾನಟ್ಟಿ ಬಳಿ ಹೆದ್ದಾರಿಯಲ್ಲಿ ಆಗಸ್ಟ್ 6ರಂದು ಚಾಲಕ ಗಡಹಿಂಗ್ಲಜ್ ಗ್ರಾಮದ ಪುಷ್ಕರ್ ಸುನೀಲ ಜೋಶಿ ಚಲಾಯಿಸುತ್ತಿದ್ದ ಇನ್ನೋವಾ ಕಾರ್ ಹಾಯ್ದು 25ರಿಂದ 30 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದನು. ಬೆಳಗಾವಿಯಿಂದ ಸಂಕೇಶ್ವರ ಕಡೆಗೆ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರ್ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಆತ ಸ್ಥಳದಲ್ಲಿ ಅಸು ನೀಗಿದ್ದ.

ತಾಲೂಕಿನ ಹತ್ತರಗಿ ಗ್ರಾಮದ ಕೃಷಿ ಸೇವಾ ಕೇಂದ್ರದ ಎದುರಿಗೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಆಗಸ್ಟ್ 25 ರಂದು ಚಾಲಕ ಚಂದನ್ ಶ್ಯಾಮರಾವ್ ಕೋರೆ ಚಲಾಯಿಸುತ್ತಿದ್ದ ಕಾರು ಹಾಯ್ದು ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ ಅಪರಿಚಿತ ಮೃತಪಟ್ಟಿದ್ದ. ಮೃತ ವ್ಯಕ್ತಿ ಸುಮಾರು 40-45 ವರ್ಷ ವಯಸ್ಸಿನವನಾಗಿದ್ದಾನೆ. ನಾಪತ್ತೆಯಾದವರ ಬಗ್ಗೆ ಮಾಹಿತಿ ಇದ್ದರೆ ಯಮಕನಮರಡಿ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಪೊಲೀಸರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗೆ ಯಮಕನಮರಡಿ ಪೊಲೀಸ್ ಠಾಣೆ ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.