ಬೆಳಗಾವಿ: ತುಮಕೂರಿನ ಶ್ರೀಗಳ ಅಗಲಿಕೆಗೆ ಡಾ.ಕೋರೆ ಕಣ್ಣೀರು

ಬೆಳಗಾವಿ: ತುಮಕೂರಿನ ನಡೆದಾಡುವ ದೇವರು, ತ್ರೀವಿಧ ದಾಸೋಹಿ ಪರಮಪೂಜ್ಯ ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಗಳ ಅಗಲಿಕೆಯು, ಇಡೀ ದೇಶಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು, ಕಂಬಿನಿ ಮಿಡಿಸಿದ್ದಾರೆ.

ಅನ್ನದಾಸೋಹಿಯಾಗಿ, ಅಕ್ಷರ ದಾಸೋಹಿಯಾಗಿ, ಜ್ಞಾನ ದಾಸೋಹಿಯಾಗಿ ಲಕ್ಷಾಂತರ ಬಡ ವಿದ್ಯಾರ್ಥಿಗಳ ಪಾಲಿಗೆ ಕಾಮಧೇನುವಾಗಿದ್ದ ಶಿವಕುಮಾರ ಶ್ರೀಗಳು ಸೇವೆ ಅನುಕರಣೀಯವಾಗಿದೆ. ಕೆಜಿಯಿಂದ ಪಿಜಿ ವರೆಗೆ ಶಿಕ್ಷಣ ನೀಡುತ್ತಿರುವ ಸಿದ್ಧಗಂಗಾ ಮಠವು ಶಿಕ್ಷಣಕ್ಕೆ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಇಂತಹ ನಾಡಿನ ಶತಾಯುಷಿ, ಶಿವಕುಮಾರ ಸ್ವಾಮೀಜಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಶ್ರೀಮಠದ ಭಕ್ತರಿಗೆ ಶ್ರೀಗಳ ಅಗಲಿಕೆ ದುಖ:ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಡಾ.ಪ್ರಭಾಕರ ಕೋರೆ ಅವರು ಶೋಕ ಸಂತಾಪ ವ್ಯಕ್ತಪಡಿಸಿದ್ದರೆ.