ಹಾವು ಕಚ್ಚಿ ಮಹಿಳೆ ಸಾವು

ಕೊಕಟನೂರ: ಗ್ರಾಮದ ಹೊರವಲಯದ ಅವಟಿ ತೋಟದ ವಸತಿಯಲ್ಲಿ ಜಾನುವಾರುಗಳಿಗೆ ಮೇವು ತರಲು ಹೋದ ವೇಳೆ ಹಾವು ಕಚ್ಚಿ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.

ಗ್ರಾಮದ ಸೋನವ್ವ ರಾಮಪ್ಪ ಅವಟಿ (55) ಮೃತ ಮಹಿಳೆ. ತಮ್ಮದೇ ಗದ್ದೆಯಲ್ಲಿರುವ ಜೋಳದ ಬಣವೆಯಿಂದ ಬುಧವಾರ ಮೇವು ತರುವ ವೇಳೆ ಹಾವು ಕಚ್ಚಿತ್ತು, ಆಗ ಬಾಯಿಂದ ನೊರೆ ಬಂದ ತಕ್ಷಣ ಅವರನ್ನು ಮಹಾರಾಷ್ಟ್ರದ ಮಿರಜ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದ್ದಾರೆ. ಇಬ್ಬರು ಪುತ್ರರು ಇದ್ದಾರೆ.

ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.