ಸಿದ್ರಾಮಗೌಡ ಕುಟುಂಬಕ್ಕೆ ದೇವೇಗೌಡ ಸಾಂತ್ವನ

ಎಂ.ಕೆ.ಹುಬ್ಬಳ್ಳಿ: ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಜೆಡಿಎಸ್ ಕಿತ್ತೂರು ಬ್ಲಾಕ್ ಅಧ್ಯಕ್ಷ ಸಿದ್ರಾಮಗೌಡ ಪಾಟೀಲ ಅವರ ಮನೆಗೆ ಭಾನುವಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ನಂತರ ಸಿದ್ರಾಮಗೌಡರ ತಾಯಿ, ಪತ್ನಿ, ಸಹೋದರರೊಂದಿಗೆ ಮಾತನಾಡಿದರು. ಕುಟುಂಬದ ಆರ್ಥಿಕ ಸ್ಥಿತಿ ಬಗ್ಗೆ ಮಾಹಿತಿ ಪಡೆದು ಅವರಲ್ಲಿ ಧೈರ್ಯ ತುಂಬಿದರು. ಮಾಜಿ ಶಾಸಕ ಕೋನರೆಡ್ಡಿ, ಬೆಳಗಾವಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ, ಬಸನಗೌಡ ಪಾಟೀಲ, ಶಂಕರ ಕಮತಗಿ, ಅಶೋಕ ಹಲಕಿ, ಬಾಳಯ್ಯ ಉದ್ದೇಶಿಮಠ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.