ಆಯತಪ್ಪಿ ಬಿದ್ದು ಬೈಕ್ ಸವಾರ ಸಾವು

ಕೊಕಟನೂರ: ಸಮೀಪದ ಹಲ್ಯಾಳ ಗ್ರಾಮದ ಹೊರವಲಯದ ಅಥಣಿ-ಹಾರೂಗೇರಿ ರಸ್ತೆಯಲ್ಲಿ ಶನಿವಾರ ಮಧ್ಯರಾತ್ರಿ ಬೈಕ್ ಸವಾರನೋರ್ವ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.

ಹಲ್ಯಾಳ ಗ್ರಾಮದ ಕುಮಾರ ಲಕ್ಷ್ಮಣ ಸನದಿ (30) ಮೃತ ಯುವಕ. ಹಾರೂಗೇರಿಯಿಂದ ಮರಳಿ ಸ್ವ ಗ್ರಾಮಕ್ಕೆ ಆಗಮಿಸುತ್ತಿರುವ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಥಣಿ ಪಿಎಸ್‌ಐ ಯು.ಎಸ್.ಅವಟಿ, ತನಿಖಾ ಸಹಾಯಕ ಸುಭಾಷ ಬಬಲೇಶ್ವರ. ಮಂಜುನಾಥ ಜಿಂಡಿಗಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
21ಕೊಕಟನೂರ2: ಕುಮಾರ ಸನದಿ