ವಿದ್ಯುತ್ ಶಾಕ್‌ನಿಂದ ವ್ಯಕ್ತಿ ಸಾವು

ಕೊಕಟನೂರ: ಗ್ರಾಮದ ಹೊರವಲಯದ ಜೋಶಿ ತೋಟದ ವಸತಿಯಲ್ಲಿರುವ ಕಬ್ಬಿನ ಗದ್ದೆಯಲ್ಲಿ ಭಾನುವಾರ ರಾತ್ರಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಟ್ರಾೃಕ್ಟರ್ ಚಾಲಕರೊಬ್ಬರು ಮೃತಪಟ್ಟಿದ್ದಾರೆ.

ಗ್ರಾಮದ ಸಂಜು ಲಕ್ಷ್ಮಣ ಸೋನಕರ್ (35) ಮೃತ ವ್ಯಕ್ತಿ. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅಥಣಿ ಪಟ್ಟಣಕ್ಕೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸೋಮೇಶ ಅನಂತಭಟ್ಟ ಜೋಶಿ ಎಂಬುವರಿಗೆ ಸೇರಿದ ಕಬ್ಬು ಸಾಗಿಸಲು ದೀಪದ ವ್ಯವಸ್ಥೆ ಮಾಡುವಾಗ ಅವಘಡ ಸಂಭವಿಸಿದೆ ಎಂದು ಸಂಜು ಅವರ ಪತ್ನಿ ಗಾಯತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಭಾರಿ ಪಿಎಸ್‌ಐ ಬಿ.ಎಸ್.ದೇವಮಾನೆ, ತನಿಖಾ ಸಹಾಯಕ ಎಸ್.ಎಂ.ಮೇತ್ರಿ, ಹವಾಲ್ದಾರ ಅರ್ಜುನ ಬಾಡಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.