More

    ಬೆಳಗಾವಿ-ಮೈಸೂರು ವಿಮಾನ ಸೇವೆ ಆರಂಭ

    ಬೆಳಗಾವಿ: ‘ಉಡಾನ್-3’ ಯೋಜನೆಯಡಿ ಆರಂಭಗೊಂಡ ಬೆಳಗಾವಿ- ಮೈಸೂರು ಮಧ್ಯೆದ ವಿಮಾನಯಾನ ಸಂಚಾರಕ್ಕೆ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಶುಕ್ರವಾರ ಚಾಲನೆ ನೀಡಿದರು.

    ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಟ್ರೂ ಜೆಟ್ ಸಂಸ್ಥೆಯ ವಿಮಾನ ಹಾರಾಟಕ್ಕೆ ಡಾ. ಕೋರೆ ಗ್ರೀನ್ ಸಿಗ್ನಲ್ ತೋರಿಸಿದ ಬಳಿಕ ವಿಮಾನ ಮೈಸೂರಿಗೆ ತೆರಳಿತು.

    ಡಾ. ಪ್ರಭಾಕರ ಕೋರೆ ಮಾತನಾಡಿ, ಬೆಳಗಾವಿ ಐತಿಹಾಸಿಕ ನಗರವಾಗಿದ್ದು, ಕರ್ನಾಟಕ- ಗೋವಾ-ಮಹಾರಾಷ್ಟ್ರ ಸೇರಿ ಮೂರು ರಾಜ್ಯಗಳನ್ನು ಬೆಸೆಯುವ ಕೊಂಡಿಯಾಗಿದೆ. ಜತೆಗೆ ವಿದ್ಯಾಕಾಶಿಯಾಗಿರುವ ಬೆಳಗಾವಿ ರಾಜ್ಯದ 2ನೇ ರಾಜಧಾನಿಯಾಗಿದೆ. ಸಕ್ಕರೆ ಉದ್ಯಮ, ಫೌಂಡ್ರಿ ಉದ್ಯಮ, ಜವಳಿ ಉದ್ಯಮ ಹಾಗೂ ಉತ್ತಮ ಪ್ರವಾಸಿ ತಾಣಗಳನ್ನೂ ಹೊಂದಿದೆ. ಈ ನಗರದಿಂದ ಮೈಸೂರು ಮತ್ತು ತಿರುಪತಿಗೆ ಹೊಸದಾಗಿ ಟ್ರೂ ಜೆಟ್ ವಿಮಾನ ಕಂಪನಿಯೂ ಹೊಸದಾಗಿ ಸೇವೆ ಆರಂಭಿಸಿರುವುದು ಸ್ವಾಗತಾರ್ಹ. ಕೂಡಲೇ ಈ ಸಂಸ್ಥೆಯು ಬೆಳಗಾವಿಯಿಂದ-ಬೆಂಗಳೂರು ಮತ್ತು ಮುಂಬೈಗೆ ಬೆಳಗಿನ ಜಾವ ವಿಮಾನ ಸೇವೆ ಆರಂಭಿಸಿದರೆ, ಈ ಭಾಗದ ಉದ್ಯಮಿಗಳಿಗೆ, ಜನರಿಗೆ ಇನ್ನೂ ಅನುಕೂಲವಾಗಲಿದೆ ಎಂದರು.

    ತಿರುಪತಿ, ಹೈದ್ರಾಬಾದ್‌ಗೂ ವಿಮಾನ ಸೇವೆ

    ನಿಲ್ದಾಣದ ನಿರ್ದೇಶಕ ಡಾ. ರಾಜೇಶಕುಮಾರ ಮೌರ್ಯ ಮಾತನಾಡಿ, ಉಡಾನ್-3 ಯೋಜನೆಯಲ್ಲಿ ಬೆಳಗಾವಿ ಆಯ್ಕೆಯಾದ ಬಳಿಕ ಬೆಳಗಾವಿಯಲ್ಲಿ ಸಾಕಷ್ಟು ಖಾಸಗಿ ಕಂಪನಿಗಳು ವಿಮಾನ ಸೇವೆ ಆರಂಭಿಸಿವೆ. ಈಗ ಸೋಮವಾರದ ವರೆಗೆ ಒಟ್ಟು 14 ಆಗಮನ- 14 ನಿರ್ಗಮನ ವಿಮಾನ ಸೇವೆಗಳು ಸೇರಿ 28 ವಿಮಾನಗಳ ಸೇವೆ ಬೆಳಗಾವಿ ನಗರದ ಜನತೆಗೆ ದೊರೆಯಲಿದೆ. ಇದು ಸಂತಸದ ಸಂಗತಿಯಾಗಿದೆ. ಶೀಘ್ರ ತಿರುಪತಿ, ಹೈದ್ರಾಬಾದ್ ಮತ್ತು ಇಂದೋರ್ ನಗರಗಳಿಗೂ ವಿಮಾನ ಸೇವೆ ಲಭಿಸಲಿದೆ ಎಂದರು. ಟ್ರೂಜೆಟ್
    ಸಿಸಿಒ ಸುಧೀರ ರಾಘವನ್, ಉದ್ಯಮಿ ಭರತ ದೇಶಪಾಂಡೆ, ಪಿ. ಹೇಮಂತರಾಜ್, ಸಿಎನ್‌ಎಸ್ ಉಸ್ತುವಾರಿ ಪಿ.ಎಸ್.ದೇಸಾಯಿ, ವಿಕ್ರಮ ಕಿಲ್ಲೇಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts