ಹುಚ್ಚು ನಾಯಿ ಕಚ್ಚಿ ಐವರಿಗೆ ಗಾಯ

ಬೋರಗಾಂವ: ಸಮೀಪದ ಶಮನೇವಾಡಿ ಗ್ರಾಮದಲ್ಲಿ ಮಂಗಳವಾರ ಹುಚ್ಚು ನಾಯಿ ಕಚ್ಚಿ ಐವರು ಗಾಯಗೊಂಡಿದ್ದಾರೆ.
ಧನಪಾಲ (51)ಹಾಗೂ ಶಿವಾನಂದ ಮಾಳಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ವಾರ ನೆರೆಯ ಮಹಾರಾಷ್ಟ್ರದಿಂದ ಶಮನೇವಾಡಿ ಗ್ರಾಮದ ಹೊರವಲಯದಲ್ಲಿ 15 ಕ್ಕೂ ಹೆಚ್ಚು ಹುಚ್ಚು ನಾಯಿಗಳನ್ನು ತಂದು ಬಿಡಲಾಗಿದೆ. ಸದ್ಯ ನಾಯಿಗಳು ಊರು ಸೇರಿಕೊಂಡು ಮನುಷ್ಯರು ಸೇರಿ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.