ನಾಲ್ಕೂವರೆ ವರ್ಷದ ಮಗು ಅಪಹರಣ

ಬೆಳಗಾವಿ: ಖಡೇ ಬಜಾರ್ ಮಾರುಕಟ್ಟೆಯಲ್ಲಿ ಭಾನುವಾರ ಸಂಜೆ ತಾಯಿ ಮತ್ತು ಅಜ್ಜಿ ತರಕಾರಿ ಮಾರಾಟ ಮಾಡುತ್ತಿದ್ದ ವೇಳೆ ನಾಲ್ಕೂವರೆ ವರ್ಷದ ಮಗು ಅಪಹರಣ ಮಾಡಲಾಗಿದೆ. ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಮಗು ಅಜ್ಜಿ ಮತ್ತು ತಾಯಿಯೊಂದಿಗೆ ಬಂದಿದ್ದ. ಅಜ್ಜಿ, ತಾಯಿ ತರಕಾರಿ ಮಾರುವಲ್ಲಿ ನಿರತವಾಗಿರುವುದನ್ನು ಗಮನಿಸಿ ಆರೋಪಿ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಮಗುವನ್ನು ಅಪಹರಿಸಿಕೊಂಡು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ಆರೋಪಿಯ ಮಾಹಿತಿ ಸಿಸಿಟಿವಿ ಕ್ಯಾಮರಾದಲ್ಲಿ ಮಾರ್ಕೆಟ್ ಠಾಣೆ ಪೊಲೀಸರಿಗೆ ಲಭ್ಯವಾಗಿದ್ದು, ಬೈಕ್ ಸಂಖ್ಯೆ ಸ್ಪಷ್ಟವಾಗಿ ಗೋಚರಿಸಿಲ್ಲ. ಆದರೂ ಆರೋಪಿ ಮುಖಚಹರೆ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.