ಸದಲಗಾದಲ್ಲಿ ಮೊಸಳೆ ಪ್ರತ್ಯಕ್ಷ

ಬೋರಗಾಂವ : ಸಮೀಪದ ಸದಲಗಾ ಪಟ್ಟಣದ ಸದಲಗಾ-ಬೋರಗಾಂವ ರಸ್ತೆ ಮೇಲೆ ಭಾನುವಾರ ರಾತ್ರಿ ಮೊಸಳೆ ಪ್ರತ್ಯಕ್ಷವಾಗಿದೆ.
ಈ ಮೊಸಳೆ ಕಳೆದ ನಾಲ್ಕು ದಿನಗಳಿಂದ ನದಿತೀರದಲ್ಲಿ ಇರುವುದು ರೈತರಿಗೆ ಕಂಡುಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಗಮನ ಹರಿಸಿಲ್ಲ.

ಸದಲಗಾ-ಬೋರಗಾಂವ ರಸ್ತೆ ಮೇಲೆ ಭಾನುವಾರ ರಾತ್ರಿ 12 ಗಂಟೆಗೆ ಮೊಸಳೆ ಓಡಾಡುತ್ತಿರುವುದು ಕಂಡು ಬಂದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.