ಮಾಜಿ ಶಾಸಕ ಸಂಭಾಜಿ ಪಾಟೀಲ್​ ಪುತ್ರ ಸಾಗರ್​ ಪಾಟೀಲ್​ ಸಾವು

ಬೆಳಗಾವಿ: ಎಂಇಎಸ್​ ಮಾಜಿ ಶಾಸಕ ಸಂಭಾಜಿ ಪಾಟೀಲ್​ ಪುತ್ರ ಸಾಗರ್​ (28) ರೈಲಿನಿಂದ ಬಿದ್ದು ಮೃತಪಟ್ಟಿದ್ದಾರೆ.

ಕೋರ್ಟ್​ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಸಾಗರ್​ ಡಿ.3ರ ರಾತ್ರಿ ಚನ್ನಮ್ಮ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಳಗಾವಿಗೆ ವಾಪಸ್​ ತೆರಳಲಿದ್ದರು. ಶ್ರೀರಾಮಪುರ ಬಳಿ ಶೌಚಗೃಹಕ್ಕೆ ತೆರಳಿದ್ದ ಸಾಗರ್​ ಅಲ್ಲಿಂದ ಬಂದು ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಬೆಂಗಳೂರು ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿತ್ತು. ಅದಕ್ಕಾಗಿಯೇ ಆಗಮಿಸಿದ್ದರು ಎನ್ನಲಾಗಿದೆ. ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿಯೇ ಪೋಸ್ಟ್​ಮಾರ್ಟ್ಂ ಮಾಡಿಸಿ ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರ ಮಾಡಲಾಗಿದೆ.