ಬೆಂಕಿ ತಗುಲಿ ಕಬ್ಬಿನ ಬೆಳೆ ಭಸ್ಮ

ಸಂಬರಗಿ: ತಾಂವಶಿ ಗ್ರಾಮದ ಹೊರವಲಯ ಅನಂತಪುರ ರಸ್ತೆ ಪಕ್ಕ ಗುರುವಾರ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.

ಬಾಳಪ್ಪ ನರಸಪ್ಪ ದಳವಾಯಿ ಎಂಬುವರ 30 ಗುಂಟೆ ಹಾಗೂ ಅಶೋಕ ದಳವಾಯಿ ಎಂಬುವರ 10 ಗುಂಟೆ ಕಬ್ಬು ಸುಟ್ಟು ಹಾನಿಯಾಗಿದೆ. ಇನ್ನೊ ಒಂದು ವಾರದಲ್ಲಿ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಣೆ ಮಾಡಲಾಗುತ್ತಿತ್ತು. ವಿದ್ಯುತ್ ತಂತಿ ತಗುಲಿ ಈ ಅವಘಡ ಸಂಭವಿಸಿದ್ದು, ಸುಮಾರು 1 ಲಕ್ಷ ರೂ. ಮೌಲ್ಯದ ಬೆಳೆ ಹಾನಿಗೀಡಾಗಿದೆ ಎಂದು ಅಂದಾಜಿಸಲಾಗಿದೆ. ಸುತ್ತ- ಮುತ್ತಲಿನ ರೈತರು ಕೊಳವೆ ಬಾವಿಯ ನೀರು ತಂದು ಬೆಂಕಿ ಆರಿಸಿ ಹೆಚ್ಚಿನ ಅನಾಹುತ ತಡೆದಿದ್ದಾರೆ.