ಬೆಳಗಾವಿ: ಸಂಭ್ರಮದಿಂದ ಸುಗಂಧಾದೇವಿ ಜಾತ್ರೆ ಮಹೋತ್ಸವ

ಬಾವನ ಸೌಂದತ್ತಿ: ಗ್ರಾಮದ ಸುಗಂಧಾದೇವಿಯ ಜಾತ್ರೆ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು. ಸುಮಾರು ಅರ್ಧ ಶತಮಾನದ ಇತಿಹಾಸ ಹೊಂದಿರುವ ದೇವಸ್ಥಾನದ ಸುಗಂಧಾ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಮಹಾನೈವೇದ್ಯ ಪ್ರತಿವರ್ಷ ರಂಗಪಂಚಮಿ ದಿನದಂದು ನಡೆದುಕೊಂಡು ಬಂದಿದೆ. ಅಂದು ಭಕ್ತರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಣ್ಣದಾಟ ಆಡಿ ನಂತರ ಕೃಷ್ಣಾನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನದವರೆಗೆ ಮಡಿ ಬಟ್ಟೆಯಲ್ಲಿ ತೆರಳಿ ದೇವಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಭಕ್ತರು ಮಂಗಳವಾರ ಬೆಳಗ್ಗೆ ಕೃಷ್ಣಾನದಿಯಲ್ಲಿ ಮಿಂದು ಮಡಿ ಬಟ್ಟೆಯಲ್ಲಿ ದೇವಸ್ಥಾನದ ಸುತ್ತ ದೀರ್ಘ ದಂಡ ನಮಸ್ಕಾರದೊಂದಿಗೆ ಭಕ್ತಿ ಸೇವೆ ಸಲ್ಲಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.