18ರಂದು ಕ್ಯಾಂಪಸ್ ಸಂದರ್ಶನ

ಚಿಕ್ಕೋಡಿ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಸಿ.ಬಿ.ಕೋರೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪುಣೆ ಮೂಲದ ಬಹುರಾಷ್ಟ್ರೀಯ ಕಂಪನಿ ಸಿನುಮೇರೊ ನಿರ್ಮಾಣ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಜು.18ರಂದು ಬೆಳಗ್ಗೆ 9 ಗಂಟೆಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.

ಆಸಕ್ತ ಅಂತಿಮ ವರ್ಷದ ಡಿಪ್ಲೊಮಾ-ಮೆಕಾನಿಕಲ್, ಮಷಿನ್ ಟೂಲ್ ಟೆಕ್ನೋಲಜಿ, ಮೆಕಾಟ್ರೋನಿಕ್ಸ್, ಅಟೋಮೊಬೈಲ್‌ಹಾಗೂ ಐಟಿಐ ಟರ್ನರ್, ಫಿಟರ್, ಡ್ರಿಲ್ಲರ್, ಮೆಕಾನಿಕ್ ಮಷಿನ್ ಟೂಲ್ ಮೆಂಟೇನನ್ಸ್ (ಎಂಎಂಟಿಎಂ) ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಪ್ರಾಚಾರ್ಯ ಸಂದೀಪ ಕ್ಯಾತನವರ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮೊ.ಸಂ.9535343319 ಸಂಪರ್ಕಿಸಬಹುದು.