21.7 C
Bengaluru
Tuesday, January 21, 2020

ಕಬ್ಬಿನ ಬಿಲ್ ಪಾವತಿಗೆ ನಾಳೆ ಡೆಡ್‌ಲೈನ್

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಬೆಳಗಾವಿ : ಪ್ರಸ್ತುತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರಿಗೆ ಸೋಮವಾರ ಸಂಜೆ (ಡಿ.17)ರ ಒಳಗಾಗಿ ಎಫ್‌ಆರ್‌ಪಿ ದರದಂತೆ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ಮಂಗಳವಾರ (ಡಿ.18)ರಿಂದಲೇ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗುವುದು ಎಂದು ಕಾರ್ಖಾನೆಗಳ ಎಂ.ಡಿ., ನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಕ್ಕರೆ ಕಾರ್ಖಾನೆಗಳ ಎಂ.ಡಿ. ಹಾಗೂ ನಿರ್ದೇಶಕರ ಸಭೆಯಲ್ಲಿ ಮಾತ ನಾಡಿದ ಅವರು, ಅಕ್ಟೋಬರ್ ಕೊನೆಯ ವಾರದಿಂದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಆರಂಭಿಸಿವೆ. ಆದರೆ, ಈ ವರೆಗೆ ಯಾವುದೇ ಕಾರ್ಖಾನೆಗಳು ರೈತರಿಗೆ ಏಕೆ ಬಾಕಿ ಬಿಲ್ ಪಾವತಿಸಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ಕಾನೂನಿನ ಪ್ರಕಾರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ 15 ದಿನಗಳೊಳಗೆ ಬಿಲ್ ಕೊಡಬೇಕು. ತಪ್ಪಿದರೆ ಬಡ್ಡಿ ಸಮೇತ ಬಿಲ್ ನೀಡಬೇಕು. ಅದನ್ನೂ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕಾರ್ಖಾ ನೆಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು.

ಕಳೆದ ಹಂಗಾಮಿನಲ್ಲಿ ಬಾಕಿ ಉಳಿಸಿಕೊಂಡಿರುವ ಬಾಕಿ ಬಿಲ್ ಹಾಗೂ ಪ್ರಸ್ತುತ ಹಂಗಾಮಿನ ಬಿಲ್‌ನ್ನು ಸೋಮವಾರ ಸಂಜೆಯ ಒಳಗೆ ರೈತರ ಖಾತೆಗಳಿಗೆ ವರ್ಗಾಯಿಸಿ, ವರದಿಯಲ್ಲಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸದ್ಯ ಸಿಎಂ ಎಚ್‌ಡಿಕೆ ಅವರು ಕಬ್ಬಿನ ಬಾಕಿ ಬಿಲ್ ಮತ್ತು ಎಫ್‌ಆರ್‌ಪಿ ದರ ನೀಡಲು ಕಾರ್ಖಾನೆ ಮಾಲೀಕರಿಗೆ ಸೂಚಿಸಿದ್ದಾರೆ.
ಒಂದು ವೇಳೆ ನಿರ್ಲಕ್ಷೃ ಮಾಡಿದರೆ ಕಾರ್ಖಾನೆಗಳು ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ. ಕಬ್ಬು ಪೂರೈಕೆ ಮಾಡಿರುವ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆರ್‌ಟಿಜಿಎಸ್ ಮೂಲಕ ಬಿಲ್ ಪಾವತಿಸಬೇಕು. ಯಾವುದೇ ಕಾರಣಕ್ಕೂ ನಗದು ರೂಪದಲ್ಲಿ ಬಿಲ್ ನೀಡುವಂತಿಲ್ಲ. ಕಳೆದ ಹಂಗಾಮಿನಲ್ಲಿ ಘೋಷಣೆ ಮಾಡಿದ ದರ ಎಷ್ಟು, ಎಷ್ಟು ಕೊಟ್ಟಿದ್ದೀರಿ, ಎಷ್ಟು ಕೊಡಬೇಕಾಗಿದೆ ಎಂಬ ಕುರಿತು ಪೂರ್ಣ ವರದಿ ನೀಡಬೇಕು ಎಂದು ಕಾರ್ಖಾನೆ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ, ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಎಸ್.ಎ. ಭಾನು ಬಳ್ಳಾರಿ ಮತ್ತಿತರರಿದ್ದರು.

4 ಕಾರ್ಖಾನೆಗಳ ನಿರ್ದೇಶಕರು ಗೈರು

ಸಭೆಯಲ್ಲಿ ಜಿಲ್ಲೆಯ 24 ಕಾರ್ಖಾನೆಗಳ ಪೈಕಿ 20 ಕಾರ್ಖಾನೆಗಳ ನಿರ್ದೇಶಕರು ಹಾಜರಾಗಿದ್ದರು. ಸೌಭಾಗ್ಯಲಕ್ಷ್ಮೀ, ಶಿವಸಾಗರ, ವಿಶ್ವರಾಜ ಶುಗರ್ಸ್, ಪ್ಯಾರಿ ಶುಗರ್ಸ್‌ನ ನಿರ್ದೇಶಕರು ಗೈರಾಗಿದ್ದರು. ಈ ಕುರಿತು ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗುವುದು ಎಂದು ಡಿಸಿ.ಬೊಮ್ಮನಹಳ್ಳಿ ತಿಳಿಸಿದರು.

ತೂಕದ ಯಂತ್ರಗಳ ಪರಿಶೀಲನೆ

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕದ ಯಂತ್ರಗಳಲ್ಲಿ ಮೋಸ ಆಗುತ್ತಿದ್ದು, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಹಾಗೂ ಸಕ್ಕರೆಯ ನ್ನು ತೂಕ ಮಾಡಲು ಪ್ರತ್ಯೇಕ ಯಂತ್ರಗಳನ್ನು ಅಳವಡಿಸಿದ್ದಾರೆ. ಕಬ್ಬು ತೂಕ ಮಾಡುವ ಯಂತ್ರಗಳಲ್ಲಿ ಮೋಸ ನಡೆಯುತ್ತಿದೆ ಎಂದು ರೈತರು ಪದೇ ಪದೆ ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಮಾಪನ ಇಲಾಖೆ ಈಗಾಗಲೆ ಒಂಭತ್ತು ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ವರದಿ ನೀಡಲಿದೆ. ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಹೇಳಿದರು.

ಇಳುವರಿಯಲ್ಲಿನ ಮೋಸ ತಡೆಗೆ ಕ್ರಮ

ಸಕ್ಕರೆ ಕಾರ್ಖಾನೆಗಳು ಇಳುವರಿಯಲ್ಲೂ ಮೋಸ ಮಾಡುತ್ತಿವೆ ಎಂಬ ದೂರು ಕೇಳಿಬರುತ್ತಿದೆ. ಸರ್ಕಾರದಿಂದ ಇಳುವರಿ ಪರಿಶೀಲನೆ
ತಂಡ ರಚಿಸಲಾಗಿದೆ. ಈ ತಂಡ ಪ್ರತಿ ತಿಂಗಳು ಕಬ್ಬಿನ ಇಳುವರಿಯನ್ನು ಪರಿಶೀಲಿಸಲಿದೆ. ಮಾರುಕಟ್ಟೆಯಲ್ಲಿ ಸಕ್ಕರೆ ದರ ಕಡಿಮೆಯಾಗುತ್ತಿದೆ ಎಂದು ಕಾರ್ಖಾನೆಗಳು ಹೇಳುತ್ತಿವೆ. ಈ ಕುರಿತು ಸಕ್ಕರೆ ಆಯುಕ್ತರ ಗಮನಕ್ಕೆ ತರಲಾಗುವುದು. ಜತೆಗೆ ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶ ಕುರಿತು ಮಾಹಿತಿ ಪಡೆಯಲಾಗುವುದು ಎಂದು ಡಿಸಿ ತಿಳಿಸಿದರು.

ಹೆಬ್ಬಾಳ್ಕರ್ ಕಾರ್ಖಾನೆ ಪ್ರಥಮ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಲೀಕತ್ವದ ಹರ್ಷ ಶುಗರ್ಸ್ ಎಫ್‌ಆರ್‌ಪಿ ದರ ಘೋಷಣೆ ಮಾಡದಿದ್ದರೂ ಮೊದಲ ಕಂತಿನಲ್ಲೇ ಪ್ರತಿ ಟನ್‌ಗೆ 2,000 ರೂ. ನಂತೆ ರೈತರಿಗೆ ಇಲ್ಲಿಯವರೆಗೆ 7.73 ಕೋಟಿ ರೂ. ಬಿಲ್ ನೀಡಿರುವ ಮೊದಲ ಕಾರ್ಖಾನೆಯಾಗಿದೆ. ಘಟಪ್ರಭಾ ಸಹಕಾರಿ ಟನ್ ಕಬ್ಬಿಗೆ 2,000 ರೂ. ಮೊದಲ ಕಂತು ಮತ್ತು ರೇಣುಕಾ ಶುಗರ್ಸ್, ಕೊಳವಿ ಮತ್ತು ಮುನವಳ್ಳಿಯ ಕಾರ್ಖಾನೆಗಳು ಮೊದಲು ಕಂತಿನಲ್ಲಿ ಟನ್ ಕಬ್ಬಿಗೆ 2,200 ರೂ. ಪಾವತಿಸಿವೆ ಎಂದು ಡಿಸಿ ತಿಳಿಸಿದರು.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...