ಅಪರ ಆಯುಕ್ತರ ಪತ್ರದಲ್ಲಿ 15 ದೋಷ!

ಇಮಾಮ್ ಹುಸೇನ್ ಗೂಡುನವರ ಬೆಳಗಾವಿ

ಕನ್ನಡ ಅಳಿವು-ಉಳಿವಿನ ಪ್ರಶ್ನೆ ಎದುರಾಗಿರುವ ಪ್ರಸ್ತುತ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದಲೆ ಕನ್ನಡದ ಕಗ್ಗೊಲೆಯಾಗುತ್ತಿದೆ!
ಈಚೆಗೆ ಬೆಳಗಾವಿ ಮೂಲದ ಸರ್ಕಾರಿ ಉರ್ದು ಮಾಧ್ಯಮ ಶಿಕ್ಷಕಿಯೊಬ್ಬರು ರಜೆ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತರಿಗೆ ಬರೆದಿದ್ದ ಪತ್ರದಲ್ಲಿ ಹತ್ತಾರು ತಪ್ಪುಗಳಿದ್ದವು. ಆಗ ಆಯುಕ್ತರು, ನನಗೆ ಮಕ್ಕಳ ಭವಿಷ್ಯದ ಚಿಂತೆ ಇದೆ ಎಂದು ಪತ್ರಕ್ಕೆ ಉತ್ತರಿಸಿದ್ದರು. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಿಕ್ಷಕಿ ಕನ್ನಡ ಪದಬಳಕೆಗೆ ಕನ್ನಡಿಗರು ಕೆಂಡಾಮಂಡಲರಾಗಿದ್ದರು. ಈ ಬೆಳವಣಿಗೆಯು ಶಿಕ್ಷಕರ ಕಾರ್ಯವೈಖರಿ ಬಗ್ಗೆ ಪ್ರಶ್ನಿಸುವಂತೆ ಮಾಡಿತ್ತು.

ಇದಾದ ಕೆಲ ದಿನಗಳಲ್ಲೇ ಇದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಅಪರ ಆಯುಕ್ತರ ಕಚೇರಿಯಿಂದ ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಶಿಕ್ಷಕಿಯೊಬ್ಬರಿಗೆ ಪ್ರಶಂಸಾ ಪತ್ರ ರವಾನೆಯಾಗಿದ್ದು, ಇದರಲ್ಲೂ 15ಕ್ಕೂ ಅಧಿಕ ತಪ್ಪುಗಳಿರುವ ಪತ್ರ ಮತ್ತೊಮ್ಮೆ ವೈರಲ್ ಆಗಿದ್ದು, ಸ್ವತಃ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇದು ಇರಿಸುಮುರಿಸು ತಂದಿದೆ.

ಅಪರ ಆಯುಕ್ತರ ಕಚೇರಿಯಿಂದ ಆಗಸ್ಟ್ 28ರಂದು ಹಿರೇಹಾಳ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಿ.ವಿ.ಯಲಬುರ್ಗಿ ಅವರಿಗೆ ಪತ್ರ ರವಾನೆಯಾಗಿದೆ. ತಾವು ಆ. 27ರಂದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, 4ನೇ ತರಗತಿಯಲ್ಲಿ 28 ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ. ಕನ್ನಡ ಭಾಷಾ ಪಠ್ಯ ಸ್ಪಷ್ಟವಾಗಿ ಓದುತ್ತಾರೆ. ಇದು ತಮ್ಮ ಸೇವೆಯ ಪ್ರತಿಲವೆಂದು ಅಪರ ಆಯುಕ್ತರಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ. ಆದರೆ, ಶೀರ್ಷಿಕೆ ಸೇರಿ ಎಂಟು ಸಾಲುಗಳ ಈ ಪತ್ರದಲ್ಲಿ ಹಲವಾರು ತಪ್ಪುಗಳಾಗಿವೆ. ವಾಕ್ಯ ರಚನೆ ಅಸ್ಪಷ್ಟವಾಗಿದೆ. ಪದಬಳಕೆಯಲ್ಲಿ ಅಪರ ಆಯುಕ್ತರ ಕಚೇರಿ ಸಿಬ್ಬಂದಿ ಎಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಶಿಕ್ಷಣ ಇಲಾಖೆ ಸಿಬ್ಬಂದಿಯೇ ಹೀಗೆ ಮಾಡಿದರೆ ಮಕ್ಕಳ ಗತಿಯೇನು? ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ.

ಏನೇನು ತಪ್ಪು?

ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ಲೆಟರ್‌ಪ್ಯಾಡ್‌ನಲ್ಲಿ ಈ ಆದೇಶ ಹೊರಡಿಸಲಾಗಿದೆ. ಮೂರು ಕಡೆಗಳಲ್ಲಿ ಅವರ ಹುದ್ದೆ ಆಪರ ಆಯುಕ್ತರು (ಅಪರ) ಎಂದಾಗಿದೆ. ಇಂಗ್ಲಿಷ್‌ನಲ್ಲಿ ಜಿಟ್ಞಚ್ಝ, ್ಚಟಞಞಜ್ಚ್ಚಿಛ್ಞಿಛ್ಟಿ, ್ಚಟಞಞಜಿಜ್ಞಿಚ್ಟ, ಈಚ್ಟಡಿಚ್ಟ ತಪ್ಪಾಗಿ ಬರೆಯಲಾಗಿದೆ. ಪ್ರಶಂಸಾಪತ್ರದ ಮೊದಲ ಅಕ್ಷರವೇ ಪ್ರಶಾಂಸಾ ಎಂದಾಗಿದ್ದು, ಬೇಟಿ (ಭೇಟಿ), ನೆಡೆಸಿದಾಗ (ನಡೆಸಿದಾಗ), ಹೀರೆಹಾಳ (ಹಿರೇಹಾಳ), ಸ್ಟಷ್ಠವಾಗಿ (ಸ್ಪಷ್ಟವಾಗಿ), ಪ್ರತಿಪಲವೆಂದು (ಪ್ರತಿಲವೆಂದು) ಎಂದು ತಪ್ಪಾಗಿ ಬರೆಯಲಾಗಿದೆ. ಹೆಸರಿನ ಮೊದಲು ಮತ್ತು ನಂತರ ಶಿಕ್ಷಕಿಯರಾದ ಮತ್ತು ಶಿಕ್ಷಕಿಯರ ಎಂದು ತಪ್ಪಾಗಿ ಸಂಬೋಧಿಸಲಾಗಿದೆ.

ನಾನು ಉತ್ತಮ ಸೇವೆಗೆ ರೋಣ ತಾಲೂಕಿನ ಹಿರೇಹಾಳ ಶಿಕ್ಷಕಿಗೆ ನೀಡಿದ ಪ್ರಶಂಸಾ ಪತ್ರದಲ್ಲಿ ಬಹಳಷ್ಟು ತಪ್ಪಾಗಿದ್ದು ಗಮನಕ್ಕೆ ಬಂದಿದ್ದು, ಅದನ್ನು ಶಿಕ್ಷಕಿಗೆ ನೀಡಿಲ್ಲ. ತಪ್ಪುಗಳನ್ನು ಸರಿಪಡಿಸಿ ಹೊಸ ಪತ್ರ ನೀಡಿದ್ದೇವೆ. ಕಚೇರಿಯ ಯಾವುದೋ ಸಿಬ್ಬಂದಿ ಮೊದಲ ಪ್ರಶಂಸಾ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮೇಜರ್ ಸಿದ್ದಲಿಂಗಯ್ಯ ಹಿರೇಮಠ
ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ