More

  ಕೈಗೆ ಕೋಳ ತೊಡಿಸಿದ್ದಲ್ಲದೇ ಯೋಧನ ಮೇಲೆ ಕ್ರೌರ್ಯ ಮೆರೆದ್ರಾ ಪೊಲೀಸರು?

  ಬೆಳಗಾವಿ: ಬಂಧಿಸಿದ ಬಳಿಕ ಸಿಆರ್​ಪಿಎಫ್​ ಯೋಧನ ಮೇಲೆ ಪೊಲೀಸರು ದರ್ಪ ಮೆರೆದ್ರಾ? ಎಂಬ ಅನುಮಾನಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಗಳು ಎಡೆಮಾಡಿಕೊಟ್ಟಿವೆ.

  ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಇಬ್ಬರು ಪೊಲೀಸ್ ಪೇದೆಗಳ ಜತೆ ನಡೆದ ಗಲಾಟೆ, ಹಲ್ಲೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್‌ಗೆ ಚಿಕ್ಕೋಡಿಯ ವಿಚಾರಣಾ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿತ್ತು.

  ಇದೀಗ ಯೋಧನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಯೋಧ ಸಚಿನ್ ಸಾವಂತ್​​ರದ್ದು ಎನ್ನಲಾದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿದೆ. ವೈರಲ್​ ಆಗಿರುವ ಚಿತ್ರದಲ್ಲಿ ಯೋಧನಿಗೆ ಬಾಸುಂಡೆ ಬರುವ ಹಾಗೆ ಹೊಡೆಯಲಾಯ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ.

  ಕೈಗೆ ಕೋಳ ತೊಡಿಸಿದ್ದಲ್ಲದೇ ಹಿಗ್ಗಾಮುಗ್ಗಾ ಹೊಡೆದ್ರಾ ಎನ್ನುವಂತಾಗಿದೆ. ಪೊಲೀಸರೇ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಫೋಟೋ ಸಮೇತ ಟ್ವಿಟರ್​ನಲ್ಲಿ ಹೊರಹಾಕಿರುವ ಆಕ್ರೋಶ ಸಂದೇಶ ಹಾಗೂ ಪೋಟೋ ವೈರಲ್ ಆಗಿದೆ.

  ಈ ಬಗ್ಗೆ ಸಿಆರ್​ಪಿಎಫ್ ಅಧಿಕಾರಿಗಳೂ ಸಹ ಯಾವುದೇ ಸ್ಪಷ್ಟನೇ ನೀಡಿಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರೇ ನಿರ್ಧಾರ ಮಾಡುತ್ತಾರೆ. ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆಂದು ಕಿರಿಯ ಸಿಆರ್​ಪಿಎಫ್ ಅಧಿಕಾರಿಗಳು ಹೇಳಿದ್ದಾರೆ.

  ಸಚಿನ್​ರನ್ನು ಹಿಂಡಲಗಾ ಜೈಲಿನಿಂದ ನೇರವಾಗಿ ಖಾನಾಪುರ ತಾಲೂಕಿನ ತೋರಾಳಿ ಗ್ರಾಮದತ್ತ ಕರೆದೊಯ್ಯಲಾಗಿದೆ. ಯೋಧ ತೋರಾಳಿ ಗ್ರಾಮದ ಕೋಬ್ರಾ ಟ್ರೈನಿಂಗ್ ಸೆಂಟರ್​ನಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್​)

  ಅರೆಸ್ಟ್ ಆಗಿದ್ದ ಬೆಳಗಾವಿ ಯೋಧ ಬಿಡುಗಡೆ: ಜೈಲಿನಿಂದ ಕರೆದುಕೊಂಡು ಹೋಗಲು ಬಂದಿದ್ದವರು ಯಾರು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts