ಕಾದು ನೋಡುವುದು ಬಿಟ್ಟು ನಮಗೆ ಬೇರೆ ದಾರಿಯಿಲ್ಲ: ಸತೀಶ್​ ಜಾರಕಿಹೋಳಿ

ಬೆಳಗಾವಿ: ಕಾದು ನೋಡುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಕಾದು ನೋಡುವುದು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ನಮ್ಮ ಜತೆಗೆ 15 ಶಾಸಕರು ಇದ್ದಾರೆ. ಅವರಿಗೆ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನ ಕೊಡಸ್ತೀವಿ ಎಂದು ಮಾಜಿ ಸಚಿವ ಸತೀಶ್​ ಜಾರಕಿಹೋಳಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಮತ್ತೆ ಕೆಲವು ಅತೃಪ್ತ ಶಾಸಕರು ಎಂ.ಬಿ.ಪಾಟೀಲ್ ಜತೆ ಸಂಪೂರ್ಣ ಚರ್ಚಿಸಿಲ್ಲ. ಜೂನ್​ 14 ಮತ್ತು 15ರಂದು ಮತ್ತೆ ಸಭೆ ಸೇರಿ ಚರ್ಚಿಸಲಿದ್ದೇವೆ ಎಂದು ಹೇಳಿದರು.

ಇಮೇಲ್ ಮೂಲಕ ಸೋಮವಾರವೇ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಹುಲ್ ಗಾಂಧಿ, ಜಿ. ಪರಮೇಶ್ವರ ಹಾಗೂ ತೆಲಂಗಾಣದ ಕುಂಟಿಯಾ ಅವರಿಗೆ ಕಳಸಿದ್ದು, ರಾಜೀನಾಮೆ ಅಂಗೀಕರಿಸಲು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದರು.

ಮಾನವ ಬಂಧುತ್ವ ವೇದಿಕೆಯಿಂದ ಪ್ರತಿಭಟನೆ
ಸತೀಶ್​ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಬೆಳಗಾವಿಯ ಸುವರ್ಣಸೌಧದ ಬಳಿ ರಸ್ತೆ ತಡೆದು, ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *