ಬೆಳಗಾವಿ ಗಲಭೆ: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್​) ಯ ಪುಂಡಾಟ ಮುಂದುವರಿದಿದ್ದು, ಎಂಇಎಸ್ ನಿಷೇಧಕ್ಕೆ ರಾಜ್ಯಾದ್ಯಂತ ಆಗ್ರಹ ಕೇಳಿಬಂದಿದೆ. ಬೆಳಗಾವಿಯಲ್ಲಿ ನಿನ್ನೆ ರಾತ್ರಿ 20ಕ್ಕೂ ಹೆಚ್ಚು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ, ರಾತ್ರೋರಾತ್ರಿ ಬೆಳಗಾವಿಯ ಅನಗೊಳದಲ್ಲಿರುವ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಕೈ ಕತ್ತರಿಸಿ ಅಪಮಾನ ಎಸಗಿದ್ದ ಆರೋಪದ ಮೇರೆಗೆ 27 ಮಂದಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣವಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಳಗಾವಿ ನಗರದ್ಯಾಂತ 144 ಸೆಕ್ಷನ್ ಜಾರಿ … Continue reading ಬೆಳಗಾವಿ ಗಲಭೆ: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ