More

    ಸಕ್ಕರೆ ಕಾರ್ಖಾನೆಗಳಿಗೆ ಲುಬ್ರಿಕೇಶನ್ ಅವಶ್ಯ-ಡಾ. ಆರ್.ಬಿ.ಖಾಂಡಗಾವೆ ಹೇಳಿಕೆ

    ಸಕ್ಕರೆ ಕಾರ್ಖಾನೆಗಳಲ್ಲಿ ಮಿಲ್ ಹಾಗೂ ಇತರೆ ಉಪಕರಣಗಳು ನಯವಾಗಿ ಕಾರ್ಯನಿರ್ವಹಿಸಬೇಕಾದರೆ ಲುಬ್ರಿಕೇಶನ್ ವ್ಯವಸ್ಥೆಯು ತುಂಬಾ ಪ್ರಮುಖವಾಗಿರುತ್ತದೆ ಎಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ ತಿಳಿಸಿದರು.
    ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಕ್ಕರೆ ಕಾರ್ಖಾನೆಯ ಲುಬ್ರಿಕೇಶನ್ ವ್ಯವಸ್ಥೆ ಮತ್ತು ಮಿಲ್ ವಿಭಾಗದಲ್ಲಿ ಬಳಸುವ ಲುಬ್ರಿಕಂಟ್ಸ್ ವಿಷಯದ ಕುರಿತು ಸಕ್ಕರೆ ಕಾರ್ಖಾನೆಗಳ ತಾಂತ್ರಿಕ ವಿಭಾಗದ ಸಿಬ್ಬಂದಿಗೆ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
    ಸಕ್ಕರೆ ಕಾರ್ಖಾನೆಗಳಲ್ಲಿ  ಉಪಕರಣಗಳು ನಯವಾಗಿ ಕಾರ್ಯನಿರ್ವಹಿಸಬೇಕಾದರೆ ಲುಬ್ರಿಕೇಶನ್ ವ್ಯವಸ್ಥೆಯು ತುಂಬಾ ಪ್ರಮುಖವಾಗಿರುತ್ತದೆ. ಕಾರ್ಖಾನೆಯಲ್ಲಿ ಉಪಯೋಗಿಸುವ ಲುಬ್ರಿಕಂಟ್ಸ್ (ಆಯಿಲ್ ಮತ್ತು ಗ್ರೀಸ್) ಜೈವಿಕವಾಗಿ ವಿಘಟನೆ ಹೊಂದಬೇಕು ಇಲ್ಲವಾದರೆ ಅವುಗಳು ನಿಸರ್ಗಕ್ಕೆ ಹಾನಿಕಾರಕವಾಗುತ್ತವೆ ಎಂದು ತಿಳಿಸಿದರು.
    ಇಂದಿನ ವಿಚಾರ ಸಂಕಿರಣ ಲುಬ್ರಿಕೇಶನ್ ವಿಭಾಗದ ಪರಿಣಿತರಿಂದ ಮಾಹಿತಿ ನೀಡುವುದಾಗಿದ್ದು, ಕಾರ್ಖಾನೆಗಳ ಪ್ರತಿನಿಧಿಗಳು ಇದರ ಸದುಪಯೋಗ  ಪಡೆದುಕೊಂಡು ಉತ್ತಮ ಗುಣಮಟ್ಟದ ಲುಬ್ರಿಕಂಟ್ಸ್ ಬಳಸಿ ಉಪಕರಣಗಳ ಕಾರ್ಯಬದ್ಧತೆಯನ್ನು ಹೆಚ್ಚಿಸಲು ನೇರವಾಗಬೇಕು ಇದರಿಂದ ಕಾರ್ಖಾನೆಯು ಆರ್ಥಿಕವಾಗಿ ಸಫಲಗೊಳ್ಳಬಹುದು ಎಂದು ತಿಳಿಸಿದರು.
    ಅಹ್ಮದಾಬಾದ್‌ನ ಏಯು ಕಾಪೋರೇಷನ್ ಸಿಇಲ ಭದ್ರೇಶ ನಾಗೋರಿ,  ಲೂಬ್‌ಮನ್ ಸೊಲ್ಯುಶನ್ಸ್ ಸಿಇಒ ಅಭಿನಯ ಮಿಥಲ್ ಅವರು, ಲುಬ್ರಿಕೇಶನ್ ವಿಭಾಗದಲ್ಲಿ ಹೊಸ ಆವಿಷ್ಕಾರಗಳು, ಉತ್ತಮ ಗುಣಮಟ್ಟದ ಲುಬ್ರಿಕಂಟ್ಸ್ ಬಳಸುವುದರಿಂದ ಆಗುವ ಲಾಭಗಳು ಹಾಗೂ ಮುಂದೆ ಆಗುವ ಬದಲಾವಣೆಗಳ ಕುರಿತು ವಿವರವಾದ ಉಪನ್ಯಾಸ ನೀಡಿದರು.      
     ಸಂಸ್ಥೆಯ ತಾಂತ್ರಿಕ ಸಲಹೆಗಾರ ಡಾ. ಎಂ. ಬಿ. ಲೋಂಡೆ, ಮಿಲ್ ವಿಭಾಗದ ಪರಿಣಿತ ಕೆ.ಬಿ. ಕಾಳೆ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 50 ಕ್ಕೂ ಅಧಿಕ ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts