ಬೆಳಗಾವಿ: ಸಾರಿಗೆ ಬಸ್ ಸಂಚಾರಕ್ಕೆ ನಿರೀಕ್ಷೆಯಷ್ಟು ಪ್ರಯಾಣಿಕರು ಬರುತ್ತಿಲ್ಲ. ಇದರಿಂದ ಬರೀ ಬಸ್ಗಳ ಡೀಸೆಲ್ ವೆಚ್ಚು ಮಾತ್ರ ಬರುತ್ತಿದೆ. ಹೀಗಾಗಿ ಸಂಬಳ ಕೊಡಲು ನಮ್ಮ ಬಳಿ ದುಡ್ಡಿಲ್ಲ. ಇದರಿಂದ ಸಾರಿಗೆ ನೌಕರರ ಸಂಬಳ ನೀಡಲು ವ್ಯತ್ಯಾಸ ಆಗುತ್ತಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಸಾರಿಗೆ ಇಲಾಖೆಯಲ್ಲಿ 1 ಲಕ್ಷ 30 ಸಾವಿರ ಸಿಬ್ಬಂದಿ ಇದ್ದಾರೆ. ಅವರಿಗೆ ಪ್ರತಿ ತಿಂಗಳು 325 ಕೋಟಿ ರೂಪಾಯಿ ಸಂಬಳ ನೀಡಬೇಕು. ಕೊರೊನಾದಿಂದ ಸಾರಿಗೆ ಇಲಾಖೆಗೆ ಅತಿ ಹೆಚ್ಚು ಹಾನಿ ಆಗಿದೆ. ಲಾಕಡೌನ್ ಆದಾಗಲೂ ಎರಡು ತಿಂಗಳ ಸಂಬಳ ಕೊಟ್ಟಿದ್ದೇವೆ. ಸಾರಿಗೆ ಬಸ್ ಸಂಚಾರಕ್ಕೆ ನಿರೀಕ್ಷೆಯಷ್ಟು ಜನರು ಬರುತ್ತಿಲ್ಲ. ಇದರಿಂದ ಈಗ ಬರೀ ಬಸ್ಗಳ ಡೀಸೆಲ್ ವೆಚ್ಚು ಮಾತ್ರ ಬರುತ್ತಿದೆ. ಹೀಗಾಗಿ ಸಂಬಳ ಕೊಡಲು ನಮ್ಮ ಬಳಿ ದುಡ್ಡಿಲ್ಲ. ಇದರಿಂದ ಸಾರಿಗೆ ನೌಕರರ ಸಂಬಳ ನೀಡಲು ವ್ಯತ್ಯಾಸ ಆಗುತ್ತಿದೆ ಎಂದರು.
ಇದನ್ನೂ ಓದಿ: ಕೊಹ್ಲಿಯನ್ನ ದ್ವೇಷಿಸ್ತಾರಂತೆ ಈ ಕ್ರಿಕೆಟಿಗ; ಅವನು ನನಗೆ ಅತ್ಯಂತ ಸಾಮಾನ್ಯ ಕ್ರಿಕೆಟಿಗ ಎಂದ ನಾಯಕ
ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಸಿದ್ದೇವೆ. ಅದನ್ನು ಆರ್ಥಿಕ ಇಲಾಖೆ ತಿರಸ್ಕರಿಸಿ, ಕಷ್ಟವಿದೆ ಎಂದು ಹೇಳಿದೆ. ಆದರೂ ನಾವು ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಕಳಸುತ್ತಿದ್ದೇವೆ. ಎರಡ್ಮೂರು ದಿನಗಳಲ್ಲಿ ಸರಿಯಾಗುವ ಭರವಸೆ ಇದೆ. ನಿರಂತರವಾಗಿ ನಾನು ಸರ್ಕಾರದ ಜತೆಗೆ ಸಂಪರ್ಕದಲ್ಲಿ ಇದ್ದೇನೆ. ನಮ್ಮ ಸಿಬ್ಬಂದಿಗಳಿಗೆ ಸಂಬಳ ನೀಡುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು. (ದಿಗ್ವಿಜಯ ನ್ಯೂಸ್)
ತಪ್ಪೇ ಮಾಡದೆ 20 ವರ್ಷ ಪಾಕ್ ಜೈಲಿನಲ್ಲಿದ್ದ ಮಾನಸಿಕ ಅಸ್ವಸ್ಥ ತವರಿಗೆ ಮರಳಿದಾಗ…