ಕೆಪಿಸಿಸಿ ಅಧ್ಯಕ್ಷರ ಪಕ್ಕ ಕೂರಲು ಕೈ ಮುಖಂಡರ ಕಿತ್ತಾಟ

ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ (ಕೆಪಿಸಿಸಿ) ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರ ಪಕ್ಕದಲ್ಲಿ ಕೂರಲು ಕಾಂಗ್ರೆಸ್​ ಮುಖಂಡು ಪೈಪೋಟಿಗೆ ಬಿದ್ದ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ.

ಭಾನುವಾರ ಬೆಳಗಾವಿಯಲ್ಲಿ ಕಾಂಗ್ರೆಸ್​ ಮುಖಂಡರ ಸಮಾವೇಶದಲ್ಲಿ ಕಾಂಗ್ರೆಸ್ ಮಹಾನಗರ ಅಧ್ಯಕ್ಷ ರಾಜು ಸೇಠ್ ಅವರನ್ನು ಕಡೆಗಣಿಸಿದಕ್ಕೆ ಆಕ್ರೋಶ ವ್ಯಕ್ತವಾಯ್ತು. ಈ ವೇಳೆ ಮಾಜಿ ಶಾಸಕ ಫಿರೋಜ್​​​ ಸೇಠ್​​​​​ ಅವರು ಬೆಳಗಾವಿ ಉಸ್ತುವಾರಿ ಮೋಹನ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೊನೆಗೆ ಮುಂದಿನ ಸಾಲಿನಲ್ಲಿ ಕುಳಿತಿದ್ದವರನ್ನು ಹಿಂದಕ್ಕೆ ಕಳಿಸಿ ರಾಜು ಸೇಠ್​​ರನ್ನು ಮುಂದಿನ ಸಾಲಲ್ಲಿ ಕೂರಿಸಿದರು. ನಾಯಕರ ಅಸಮಾಧಾನ ಕಂಡ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.