ಸಂಪುಟ ವಿಸ್ತರಣೆ ಬಳಿಕವೇ ಮೈತ್ರಿ ಸರ್ಕಾರ ಬೀಳಲಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಖಾದರ್ ಖಾರ​ ಪ್ರತಿಕ್ರಿಯೆ

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯಾದ ಮಾರನೆ ದಿನವೇ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆಗೆ ಸಚಿವ ಯು.ಟಿ.ಖಾದರ್​ತಿರುಗೇಟು ನೀಡಿದ್ದಾರೆ.

ಸೋಮವಾರ ಸುವರ್ಣಸೌಧದ ಮುಂಭಾಗದಲ್ಲಿರುವ ಕೊಂಡಸಕೊಪ್ಪದಲ್ಲಿ ಫೆಡರೇಶನ್ ಆಫ್​ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ವತಿಯಿಂದ ನಡೆದ ಬೃಹತ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ‌ಸಚಿವ ಯು.ಟಿ. ಖಾದರ್​ ಸಮಸ್ಯೆ ಆಲಿಸಿ ಮನವಿ ತೆಗೆದುಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಚಿವ ಸಂಪುಟ ವಿಸ್ತರಣೆಯಾದ ಮರು ದಿನವೇ ಭಿನ್ನಮತ ಸ್ಫೋಟದಿಂದ ಮೈತ್ರಿ ಸರ್ಕಾರ ಬೀಳಲಿದೆ. ನಾವು ಸರ್ಕಾರ ಕೆಡುವುದಕ್ಕೆ ಹೋಗುವುದಿಲ್ಲ. ಅದು ತಾನಾಗಿಯೇ ಬೀಳಲಿದೆ ಕಾಯ್ದು ನೋಡಿ. ರಾಜ್ಯದಲ್ಲಿ ಸರ್ಕಾರ ಜಿವಂತವಾಗಿಲ್ಲ. ಹೀಗಾಗಿ ಅಧಿವೇಶನಕ್ಕೆ ಯಾವ ಸಚಿವರೂ ಆಗಮಿಸುತ್ತಿಲ್ಲ. ಸಭೆಯ ಒಳಗಡೆಯ ಮುಂದಿನ ಸಾಲಿನಲ್ಲಿ ಯಾರು ಕಾಣಿಸುವುದಿಲ್ಲ. ಸದನದಲ್ಲಿ ಶಾಸಕರು ಭಾಗಿಯಾಗಲು ನಿರಾಸಕ್ತಿ ಹೊಂದಿದ್ದಾರೆ ಎಂದು ಹೇಳಿದರು.

ಈಶ್ವರಪ್ಪ ಹೇಳಿಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಖಾದರ್​ ಅವರು ಕಾಂಗ್ರೆಸ್​ನಲ್ಲಿ ಯಾವುದೇ ಅತೃಪ್ತ ಶಾಸಕರಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯೂ ಇಲ್ಲ. 5 ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ. ಸರ್ಕಾರದ ಶಾಸಕರು ಹಾಗೂ ಸಚಿವರು ಸಂಪೂರ್ಣವಾಗಿ ಸದನದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್​)