ಬೈಕ್ ಸಾಹಸ ಅನುಕರಿಸಲು ಹೋಗಿ ಗಾಯಗೊಂಡ ಯುವಕರು

ಗೋಕಾಕ: ಇಲ್ಲಿನ ಶಾಲೆ ಆವರಣದಲ್ಲಿ ಕೆಟಿಎಂ ಕಂಪನಿಯ ಬೈಕ್ ಸಾಹಸ ಪ್ರದರ್ಶನ ವೀಕ್ಷಿಸಿದ ಇಬ್ಬರು ಯುವಕರು ಈ ಸಾಹಸವನ್ನು ಅನುಕರಣೆ ಮಾಡಲು ಹೋಗಿ ಬೈಕ್‌ನಿಂದ ಬಿದ್ದು ಬುಧವಾರ ಗಾಯಗೊಂಡಿದ್ದಾರೆ. ಇಂತಹ ಅಪಾಯಕಾರಿ ಬೈಕ್ ಪ್ರದರ್ಶನ ವಿರುದ್ಧ ನಗರದಲ್ಲಿ ಅಸಮಾಧಾನ ಭುಗಿಲ್ಲೆದ್ದಿದೆ.

ಮಾರಾಟಗಾರರು ಪೊಲೀಸರ ಪರವಾನಗಿ ಪಡೆದು ಪ್ರದರ್ಶನ ಏರ್ಪಡಿಸಿದ್ದರು ಎಂದು ಗೊತ್ತಾಗಿದ್ದು, ಬೈಕ್ ಮೇಲೆ ಆಕರ್ಷಕ ಸ್ಟಂಟ್ ಪ್ರದರ್ಶಿಸಿಸಿ ಯುವಕರನ್ನು ಆಕರ್ಷಿಸಿದ್ದಾರೆ. ಪರಿಣಿತರಲ್ಲದವರು ಈ ಸಾಹಸವನ್ನು ಅನುಸರಿಸಬಾರದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ರಿದ್ದಿ ಸಿದ್ದಿ ಕಾರ್ಖಾನೆ ಬಳಿ ಇಬ್ಬರು ಸವಾರರು ಈ ಸಾಹಸ ಪ್ರದರ್ಶಿಸಲು ಹೋಗಿ ಬಿದ್ದು ಗಾಯಗೊಂಡಿದ್ದಾರೆ.

ವಾಹನಗಳ ಮಾರಾಟಕ್ಕಾಗಿ ಇಂಥ ಬೈಕ್ ಪ್ರದರ್ಶನ ಏರ್ಪಡಿಸಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ನಿಲ್ಲಿಸಬೇಕು ಎಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.