Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಒತ್ತಡ ತಂದು ಲಾಭ ಪಡೆದ ಬ್ರದರ್ಸ್

Saturday, 15.09.2018, 2:03 AM       No Comments

ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವ ಕಡಿಮೆಯಾಗುವುದೆಂದು ಅಸಮಾಧಾನಗೊಂಡಿದ್ದ ಜಾರಕಿಹೊಳಿ ಸಹೋದರರು, ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕಿ ಬೇಳೆ ಬೇಯಿಸಿಕೊಂಡಿದ್ದಾರೆ.

ಸರ್ಕಾರವೇ ಬಿದ್ದು ಹೋಗುತ್ತದೆಂಬ ಊಹಾಪೋಹಗಳಿಗೆ ಜಾರಕಿಹೊಳಿ ಸಹೋದರರ ನಡೆ ಕಾರಣವಾಗಿತ್ತು. ಆದರೆ, ಈ ಸಹೋದರರು ಪ್ರಭಾವದ ಜತೆ ಸರ್ಕಾರ ಮಟ್ಟದಲ್ಲಿ ಕೆಲಸಗಳಾಗುವಂತೆ ಈ ಪ್ರಕರಣವನ್ನು ಸಮರ್ಥವಾಗಿ ಬಳಸಿಕೊಂಡರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಮನಕನಮರಡಿಯಲ್ಲಿ ಸತೀಶ್ ಜಾರಕಿಹೊಳಿ ಕಡಿಮೆ ಅಂತರದಲ್ಲಿ ಗೆದ್ದಿದ್ದರು. ಗೋಕಾಕದಲ್ಲಿ ರಮೇಶ್ ಜಾರಕಿಹೊಳಿ ಸಾಕಷ್ಟು ಬೆವರು ಹರಿಸಿದ್ದರು. ಇದಕ್ಕೆ ಪಕ್ಷದ ವಿರೋಧಿಗಳೇ ಕಾರಣವಾಗಿದ್ದರು. ಹೀಗೇ ಮುಂದುವರಿದರೆ ಮುಂದೆ ಜಿಲ್ಲಾ ರಾಜಕೀಯ ಕಷ್ಟ ಎಂದು ಅರಿತು ಪಿಎಲ್​ಡಿ ಬ್ಯಾಂಕ್ ಚುನಾವಣೆಯನ್ನೇ ಅಸ್ತ್ರವಾಗಿ ಬಳಸಿ ಬೇಡಿಕೆ ಈಡೇರಿಸಿಕೊಂಡಿದ್ದಾರೆ.

ಸಂಪುಟ ವಿಸ್ತರಣೆಯಾದರೆ ರಮೇಶ್ ಜಾರಕಿಹೊಳಿ ಸ್ಥಾನ ಕಳೆದುಕೊಳ್ಳುತ್ತಾರೆಂಬ ಮಾತುಗಳು ಪಕ್ಷದಲ್ಲಿದ್ದವು. ಆ ಸ್ಥಾನ ಜಾರಕಿ ಹೊಳಿ ಕುಟುಂಬಕ್ಕೋ ವಿರೋಧಿ ಲಕ್ಷಿ್ಮೕ ಹೆಬ್ಬಾಳ್ಕರ್​ಗೋ ಎಂಬ ಚರ್ಚೆಯೂ ಇದ್ದರಿಂದ ಈ ತಂತ್ರ ಮಾಡಿ 2 ವರ್ಷ ರಮೇಶ್ ನಂತರ ಸತೀಶ್ ಮಂತ್ರಿಯಾಗುತ್ತಾರೆಂಬ ಭರವಸೆ ಪಡೆದಿ ದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಹೆಬ್ಬಾಳ್ಕರ್ ಪರ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್ ಕೆಲ ಮುಖಂಡರು ಜಿಲ್ಲಾ ರಾಜಕಾರಣದಲ್ಲಿ ತಲೆ ಹಾಕದಂತೆ ಮಾಡುವಲ್ಲೂ ಯಶ ಕಂಡಿದ್ದಾರೆ. ರಮೇಶ್ ಜಾರಕಿಹೊಳಿ ನಿರ್ವಹಿಸುವ ಪೌರಾಡಳಿತ ಇಲಾಖೆಯಲ್ಲಿ ಅವಧಿ ಮೀರಿದ 144 ವರ್ಗಾವಣೆಯನ್ನು ಮಾಡಿಸಿಕೊಂಡಿದ್ದಾರೆ. ಇದು ಬೇರೆ ಇಲಾಖೆಗಳಿಗಿಂತ ಹೆಚ್ಚು ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ಅಲ್ಲದೆ, ಸಮುದಾಯದ ಬೆಂಬಲಿಗ ಶಾಸಕರಿಗೆ ಮಂತ್ರಿ ಸ್ಥಾನ ಕೊಡಿಸುವ ಪ್ರಯತ್ನ ನಡೆದಿದ್ದರೂ ಈಗಾಗಲೇ ಸಂಡೂರಿನ ತುಕರಾಂ ಅವರಿಗೆ ಹೈಕಮಾಂಡ್ ಭರವಸೆ ನೀಡಿದ್ದರಿಂದ ಮುಂದೇನು ಎಂಬುದು ಕುತೂಹಲ. ಆದರೆ, ನಿಗಮ-ಮಂಡಳಿಗಳಲ್ಲಿ ಸ್ಥಾನ ಕೊಡಿಸಲು ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಜಾರಕಿಹೊಳಿ ಸಹೋದರರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ. ರೈತರಿಗೆ ಬಾಕಿ ಪಾವತಿಸದ ಕಾರ್ಖಾನೆ ಮಾಲೀಕರಿಗೆ ಸರ್ಕಾರ ರಿಕವರಿ ನೋಟಿಸ್ ನೀಡುತ್ತಿದೆ. ಆ ಮೂಲಕ ಸಾಕಷ್ಟು ಬಾಕಿ ರೈತರಿಗೆ ಪಾವತಿಯಾಗಿದೆ. ಕಾರ್ಖಾನೆಗಳ ಮಾಲೀಕರಿಂದ ಸಕ್ಕರೆ ವಶಕ್ಕೆ ಪಡೆದು ಹರಾಜು ಹಾಕದಂತೆ ಒತ್ತಡ ತರುವ ತಂತ್ರವು ಈ ಪ್ರಹಸನದ ಹಿಂದಿತ್ತು ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ರಮೇಶ್ ನನ್ನ ಆತ್ಮೀಯ

ಸಚಿವ ರಮೇಶ್ ಜಾರಕಿಹೊಳಿ ಸಂಕಷ್ಟದಲ್ಲಿದ್ದಾಗ ಬಂಡೆಗಲ್ಲಿನಂತೆ ಅವರ ಹಿಂದೆ ನಿಂತಿದ್ದೆ. ಅವರು ಈಗಲೂ ನನಗೆ ಸ್ನೇಹಿತ. ಅವರ ಮನೆಗೆ ಹೋಗಿ ಮಾತನಾಡುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಭಕ್ತನಿಗೂ ಭಗವಂತನಿಗೂ ಯಾವ ರೀತಿ ಸಂಬಂಧ ಇದೆ ಎಂಬುದು ಅವರಿಬ್ಬರಿಗೆ ಗೊತ್ತಿರುತ್ತೆ. ಹೀಗಾಗಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ನನ್ನ ನಡುವಿನ ಸಂಬಂಧ ಎಂಥದ್ದು ಎಂಬುದನ್ನು ಮಾಧ್ಯಮಗಳಿಗೆ ಹೇಳಬೇಕಿಲ್ಲ ಎಂದು ತಿಳಿಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಪಕ್ಷದ ಕಾರ್ಯತಂತ್ರ ರೂಪಿಸುವುದು ಹಾಗೂ ಮತ್ತಿತರ ಪಕ್ಷದಲ್ಲಿನ ವಿದ್ಯಮಾನಗಳ ಕುರಿತು ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ನನ್ನೊಂದಿಗೆ ರ್ಚಚಿಸಿದ್ದಾರೆ. ಎಲ್ಲ ಮಾಹಿತಿಯನ್ನು ಹೇಳಲಾಗು ವುದಿಲ್ಲ ಎಂದರು. ರಾಜಕೀಯದಲ್ಲಿ ಏನೇನೋ ನಡೆಯುತ್ತಿರುತ್ತದೆ. ಯಾವ ಸಂದರ್ಭದಲ್ಲಿ ಯಾವ ಪಾನ್ ಮೂವ್ ಮಾಡಬೇಕು ಎಂಬುದು ಗೊತ್ತಿರಬೇಕಷ್ಟೇ. ಕಾಂಗ್ರೆಸ್​ನ ಎಷ್ಟು ಜನ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾ ರೆಂಬುದು ನನಗೆ ಗೊತ್ತಿಲ್ಲ. ಅಂತಹ ವಿಚಾರಗಳನ್ನು ಪಕ್ಷದ ಹಿರಿಯರು ನೋಡಿಕೊಳ್ಳುತ್ತಾರೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ಎಂದಷ್ಟೇ ಹೇಳಿದರು.

Leave a Reply

Your email address will not be published. Required fields are marked *

Back To Top