ಚೋಪ್ರಾ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಮುನವಳ್ಳಿ: ವಿಧಾನಸಭೆ ಚುನಾವಣೆಯಲ್ಲಿ ಸವದತ್ತಿ ತಾಲೂಕಿನಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಆನಂದ ಚೋಪ್ರಾ ಮೇಲೆ ಸವದತ್ತಿಯಲ್ಲಿ ಶನಿವಾರ ರಾತ್ರಿ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಆನಂದ ಚೋಪ್ರಾ ಬೆಂಬಲಿಗರು ಭಾನುವಾರ ಪಟ್ಟಣದ ಶ್ರೀ ಪಂಚಲಿಂಗೇಶ್ವರ ಕ್ರಾಸ್‌ನಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಎ.ಪಿ.ಎಂ.ಸಿ. ನಿರ್ದೇಶಕ ಉಮೇಶ ಬಾಳಿ ಮಾತನಾಡಿ, ಹಲವು ವರ್ಷಗಳಿಂದ ಬಡವರ, ದೀನ-ದಲಿತರ ಅಭಿವೃದ್ಧಿಗಾಗಿ ಸಹಾಯ ಮಾಡುತ್ತ ಸಮಾಜಮುಖಿ ಕಾರ್ಯಗೈಯ್ದು ಜನನಾಯಕರಾಗಿ ಬೆಳೆದಿದ್ದ ಚೋಪ್ರಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ಖಂಡನೀಯ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ನ್ಯಾಯ ಒದಗಿಸಬೇಕು. ತಾಲೂಕಿನಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯ ಪರಶುರಾಮ ಗಂಟಿ, ಮಂಜುನಾಥ ಹನಸಿ, ಅರ್ಜುನ ಕಾಮಣ್ಣವರ, ಶೇಖರ ಗೋಕಾಂವಿ, ಮಲ್ಲಿಕಾರ್ಜುನ ದಸ್ತಿ, ದಾದಾಪೀರ ಅತ್ತಾರ, ನಾಗಪ್ಪ ಕಟ್ಟಿ, ದುರಗಪ್ಪ ಕಿನ್ನೂರಿ, ಪಂಚನಗೌಡ ಕಳಸನಗೌಡ್ರ, ಪ್ರಸಾದ ವಿರುಪಯ್ಯನವರಮಠ, ಸೂರಯ್ಯ ರಾವತಗೋಳ, ಅಕ್ಬರ್ ಜಮಾದಾರ, ಸುರೇಶ ಮುನವಳ್ಳಿ ಸೇರಿ ಇತರರು ಇದ್ದರು. ಉಪತಹಸೀಲ್ದಾರ್ ಪವಾರ ಆಗಮಿಸಿ ಮನವಿ ಸ್ವೀಕರಿಸಿದರು.