ಭಾರತ್​ ಬಂದ್​: ರೈಲಿನಲ್ಲೇ ಮಹಿಳೆಗೆ ಹೆರಿಗೆ

ಬೆಳಗಾವಿ: ದೇಶಾದ್ಯಂತ ಇಂದು ಭಾರತ್​ ಬಂದ್​ನಿಂದ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಮಹಿಳೆಯೊಬ್ಬರು ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಬಸ್​ ಇಲ್ಲದ ಕಾರಣ ಶಾಹುಪಾರ್ಕ್ ಗ್ರಾಮದ ನಿವಾಸಿ ಯಲ್ಲವ್ವ ಮಹೇಶ ಗಾಯಕವಾಡ (23) ಎಂಬ ಮಹಿಳೆ ಕೊಲ್ಹಾಪುರದಿಂದ ರಾಯಭಾಗದ ಆಸ್ಪತ್ರೆಗೆ ರೈಲಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹೆರಿಗೆ ನೋವು ತಾಳಲಾರದೆ ಗಂಡು ಮಗುವಿಗೆ ರೈಲಿನಲ್ಲೇ ಜನ್ಮ ನೀಡಿದ್ದಾರೆ.

ಹೆರಿಗೆ ನಂತರ ತಾಯಿ ಮಗುವನ್ನು ರಾಯಭಾಗ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ-ಮಗು ಆರೋಗ್ಯವಾಗಿರುವುದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್​)