ಮೂಡಲಗಿಯಲ್ಲಿ ಸರಣಿ ಕಳ್ಳತನ ಯತ್ನ

ಮೂಡಲಗಿ: ಪಟ್ಟಣದ ಲಕ್ಷ್ಮೀನಗರದಲ್ಲಿನ ಮನೆ, ಬ್ಯೂಟಿ ಪಾರ್ಲರ್, ಖಾಸಗಿ ಆಸ್ಪತ್ರೆ ಮತ್ತು ಧರ್ಮಸ್ಥಳ ಸಂಘದ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವುದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಮನೋಹರ ಮೂಡಲಗಿ ಅವರ ಮನೆ, ಜಯಲಕ್ಷ್ಮೀ ಪವಾರಗೆ ಸೇರಿದ ಬ್ಯೂಟಿ ಪಾರ್ಲರ್, ಡಾ. ಸುರೇಶ ಗುಡಗುಡಿ ಅವರ ಆಸ್ಪತ್ರೆಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ.
ಸಿಪಿಐ ವೆಂಕಟೇಶ ಮುರನಾಳ, ಪಿಎಸ್‌ಐ ಶರಣೇಶ ಜಾಲಿಹಾಳ, ಬೆಳಗಾವಿಯ ಶ್ವಾನದಳ, ಬೆರೆಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದಲ್ಲಿ ಪೊಲೀಸರು ರಾತ್ರಿ ಗಸ್ತು ನಡೆಸಿ ಸಾರ್ವಜನಿಕರಲ್ಲಿನ ಭಯದ ವಾತಾವರಣ ದೂರಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.