ಬೆಳಗಾವಿಯನ್ನು ಕರ್ನಾಟಕದ 2ನೇ ರಾಜಧಾನಿ ಮಾಡಲು ಸಿದ್ಧ: ಎಚ್​ಡಿಕೆ

ಬೆಂಗಳೂರು: ಬೆಳಗಾವಿಯನ್ನ 2ನೇ ರಾಜಧಾನಿ ಮಾಡೋಕೆ ಸಿದ್ಧ. ನಾನು ಇದನ್ನು 2006ರಲ್ಲೇ ಹೇಳಿದ್ದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಉತ್ತರ ಕರ್ನಾಟಕ ಹೋರಾಟಗಾರರ ಜತೆಗಿನ ಸಭೆಯಲ್ಲಿ ಮಾತನಾಡಿದ ಎಚ್​ಡಿಕೆ, 20-20 ಸರ್ಕಾರದಲ್ಲಿ ಉತ್ತರ ಭಾಗಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದೆ. ಬೆಳಗಾವಿಯನ್ನ 2ನೇ ರಾಜಧಾನಿ ಮಾಡಲು ನಾನು ಸಿದ್ಧ. ಆದರೆ, ಉತ್ತರ ಮತ್ತು ದಕ್ಷಿಣ ಕರ್ನಾಟಕ ಎನ್ನುವ ಬಗ್ಗೆ ಚಿಂತನೆ ಮಾಡಿಲ್ಲ ಎಂದರು.

ಮತ್ತೊಬ್ಬರ ಹಂಗಿನಲ್ಲಿ ಅಧಿಕಾರ ನಡೆಸುವಾಗ ತೀರ್ಮಾನ ತೆಗೆದುಕೊಳ್ಳುವುದು ಸ್ವಲ್ಪ ತಡವಾಗಬಹುದು. ಅದಕ್ಕಾಗಿ ನನಗೆ ಸಮಯ ಕೊಡಿ ಎಂದು ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)