More

    ಶೀಘ್ರದಲ್ಲಿಯೇ ಬೀರೂರು ರೈಲು ನಿಲ್ದಾಣದಲ್ಲಿ ಲಿಫ್ಟ್ ಸೌಲಭ್ಯ

    ಬೀರೂರು: ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸಲು ಬೀರೂರು ರೈಲು ನಿಲ್ದಾಣದಲ್ಲಿ ಪ್ಲಾಟ್​ಫಾರ್ಮ್ ​ಗಳ ನಡುವೆ ಸಂಚರಿಸಲು ಲಿಫ್ಟ್ ಸೌಲಭ್ಯ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ಮ್ಯಾನೇಜರ್ ಅಪರ್ಣಾ ಗಾರ್ಗ್ ತಿಳಿಸಿದರು.

    ಸೋಮವಾರ ಬೆಂಗಳೂರಿಗೆ ತೆರಳುವಾಗ ಬೀರೂರು ರೈಲು ನಿಲ್ದಾಣದಲ್ಲಿ ಜನರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಬೀರೂರು ನಿಲ್ದಾಣದಲ್ಲಿ ಪ್ಲಾಟ್​ಫಾಮ್ರ್ ಎತ್ತರದಲ್ಲಿದೆ. ಹಿರಿಯ ನಾಗರಿಕರಿಗೆ ಪಕ್ಕದ ಪ್ಲಾಟ್​ಫಾಮ್ರ್ ತಲುಪುವುದು ಕಷ್ಟವಾಗುತ್ತಿದೆ. ರ‍್ಯಾಂಪ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹಲವು ಬಾರಿ ಮನವಿ ಬಂದ ಹಿನ್ನೆಲೆಯಲ್ಲಿ ಲಿಫ್ಟ್ ಅಳವಡಿಸಲು ನಿರ್ಧರಿಸಲಾಗಿದೆ ಎಂದರು.

    ನಿಲ್ದಾಣದಲ್ಲಿ ಹಲವು ರೈಲುಗಳ ನಿಲುಗಡೆ ಹಲವು ಮನವಿಗಳು ಬಂದಿವೆ. ಆದರೆ ಅದು ರೈಲುಗಳ ಸಮಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸ್ವಯಂ ನಿರ್ಧಾರ ಸಾಧ್ಯವಿಲ್ಲ. ಸ್ಥಳೀಯ ಸಂಸದರಿಂದ ಮನವಿ ಕಳಿಸಿದರೆ ನಿಲುಗಡೆ ಕುರಿತು ಪರಿಗಣಿಸಲಾಗುವುದು ಎಂದು ಹೇಳಿದರು.

    ಬೀರೂರು ನಿಲ್ದಾಣದಲ್ಲಿ ಶಿವಮೊಗ್ಗ-ಬೆಂಗಳೂರು, ಯಶವಂತಪುರ- ಪಂಡರಾಪುರ, ಯಶವಂತಪುರ-ವಾರಣಾಸಿ ರೈಲು ನಿಲುಗಡೆ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts