More

  ಕರೊನಾ ಹಾವಳಿಯ ಬೆನ್ನಲ್ಲೇ ಭೀಕರ ಸುನಾಮಿ ಬರುತ್ತಂತೆ!

  ಹೊಸದುರ್ಗ: ಕರೊನಾ ರಣಕೇಕೆ ಬೆನ್ನಲ್ಲೇ ಭೀಕರ ಸುನಾಮಿ ಸಂಭವಿಸಲಿದ್ದು ಅನೇಕ ಭೂ ಪ್ರದೇಶಗಳು ಸಮುದ್ರದ ಪಾಲಾಗಲಿವೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ಭವಿಷ್ಯ ನುಡಿದಿದ್ದಾರೆ.

  ತಾಲೂಕಿನ ಮತ್ತೋಡು ಹೋಬಳಿಯ ಇತಿಹಾಸ ಪ್ರಸಿದ್ಧ ದಶರಥರಾಮೇಶ್ವರ ಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿ, ದಶರಥರಾಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.

  ದೇಶದಲ್ಲಿ ಭೂಕಂಪನ ಸಂಭವಿಸುತ್ತದೆ. ಕೊಡಗು ನೆಲಸಮವಾಗುತ್ತದೆ. ತಮಿಳುನಾಡು, ಆಂಧ್ರ, ಪಾಂಡಿಚೇರಿಯಲ್ಲಿ ಈ ಹಿಂದೆ ಉಂಟಾಗಿದ್ದ ಸುನಾಮಿ ಈಗ ಭೀಕರವಾಗಿ ಬರಲಿದೆ. ಭೂಕಂಪನದಿಂದ ಅಮೆರಿಕದಿಂದ ಆಸ್ಟ್ರೇಲಿಯಾದವರೆಗೆ ಅನೇಕ ಭೂ ಪ್ರದೇಶಗಳು ಸಮುದ್ರದ ಪಾಲಾಗಲಿವೆ ಎಂದು ಹೇಳಿದರು.

  ಇದನ್ನೂ ಓದಿ   ಟೀಕಿಸಿದವರಿಗೆ ಮಂಗಳೂರಿನ ಗಗನಸಖಿಯ ಖಡಕ್ ಪ್ರತ್ಯುತ್ತರ

  ಈಗ ಬಂದಿರುವುದು ಕರೊನಾ ಅಲ್ಲ. ಸಪ್ತಮಾತೃಕೆಗಳಲ್ಲಿ ಒಬ್ಬಳಾದ ಕೌಮಾರಿ. ಈ ಹಿಂದೆ ಪ್ಲೇಗಮ್ಮ ಆಗಿ ಬಂದಿದ್ದ ಕೌಮಾರಿಯೇ ಈ ಕರೊನಾ. ಅಧರ್ಮವನ್ನು ನಿರ್ನಾಮ ಮಾಡಲು ಕರೊನಾ ರೂಪದಲ್ಲಿ ಅವತರಿಸಿದೆ. ಈ ರೋಗ ನಿಯಂತ್ರಣಕ್ಕೆ ಶಕ್ತಿ ದೇವತೆಗಳ ದೇವಾಲಯದಲ್ಲಿ ಅರಿಶಿಣ, ಹಾಲು, ಮೊಸರು ಹಾಗೂ ಬೇವಿನ ಎಲೆಯೊಂದಿಗೆ ದೇವಿಗೆ ನಿತ್ಯ ಅಭಿಷೇಕ ಮಾಡಬೇಕು ಎಂದು ಹೇಳಿದರು.

  ಕುಟುಂಬದೊಂದಿಗೆ ಯಾರು ನೆಮ್ಮದಿಯಿಂದ ಇರುತ್ತಾರೆಯೋ ಅವರ‌್ಯಾರಿಗೂ ಕರೊನಾದಿಂದ ಸಾವು ಬರುವುದಿಲ್ಲ. ಆಸ್ಪತ್ರೆಗಳಲ್ಲಿ ಮಾತ್ರ ಜನ ಸಾಯುತ್ತಿದ್ದಾರೆ. ಅಲ್ಲಿಗೆ ಹೋದವರಿಗೆಲ್ಲ ಕರೊನಾ ಅಂತ ಹೇಳುತ್ತಿರುವುದು ಮಾಫಿಯಾ. ವಿಶ್ವ ಆರೋಗ್ಯ ಸಂಸ್ಥೆಯ ದುಡ್ಡು ಪಡೆಯಲು ಇದೊಂದು ನಾಟಕ. ಈ ರೋಗಕ್ಕೆ ಮುಕ್ತಿಯಿಲ್ಲ. ಡೆಂೆ, ಪ್ಲೇಗ್ ರೀತಿ ಜನರ ನಡುವೆ ಈ ಕಾಯಿಲೆ ಇರುತ್ತದೆ ಎಂದರು.

  ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts