ಬೇಡಿಕೊಂಡರೂ ಬಿಡದೆ ತಂದೆ – ಅಣ್ಣನಿಂದಲೇ ನಿರಂತರ ಚಾಕು ಇರಿತಕ್ಕೆ ಒಳಗಾದ ಬಾಲಕಿ ಬಿಚ್ಚಿಟ್ಟ ಸತ್ಯ!

ಶಾಹ್ಜಾನ್‌ಪುರ: ತಂದೆ ಮತ್ತು ಅಣ್ಣ ಸೇರಿಕೊಂಡು 15 ವರ್ಷದ ಬಾಲಕಿಗೆ ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಶಾಹ್ಜಾನ್‌ಪುರದಲ್ಲಿ ನಡೆದಿದ್ದು, ಓದುವುದನ್ನು ನಿಲ್ಲಿಸಿ ಮದುವೆ ಮಾಡಿಕೊಳ್ಳಲು ಬಾಲಕಿ ನಿರಾಕರಿಸಿದ್ದಕ್ಕೆ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ನನ್ನ ತಂದೆ ನನ್ನನ್ನು ಕಾಲುವೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ನನ್ನ ಅಣ್ಣನು ಅವರನ್ನು ಸೇರಿಕೊಂಡ. ಬಳಿಕ ಕುತ್ತಿಗೆಗೆ ಬಟ್ಟೆ ಹಾಕಿ ಹಿಡಿದುಕೊಂಡಾಗ ನನ್ನ ತಂದೆ ಹಿಂದಿನಿಂದ ನಿಂತು ಚಾಕುವಿನಿಂದ ನಿರಂತರವಾಗಿ ತಿವಿದರು. ನಿಲ್ಲಿಸುವುಂತೆ ಬೇಡಿಕೊಂಡರು ಬಿಡದೆ ಚಾಕುವಿನಿಂದ ಹಲ್ಲೆ ನಡೆಸಿದರು. ನನ್ನ ಓದನ್ನು ನಿಲ್ಲಿಸಿ ಮದುವೆಯಾಗಬೇಕೆನ್ನುವುದು ಅವರ ಆಸೆಯಾಗಿತ್ತು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

ಚಾಕುವಿನಿಂದ ನಿರಂತರವಾಗಿ ತಿವಿದ ಬಳಿಕ ಕಾಲುವೆಗೆ ನನ್ನನ್ನು ತಳ್ಳಿದರು. ಬಳಿಕ ನಾನು ಬದುಕಿದ್ದೇನೋ ಇಲ್ಲವೋ ಎಂದು ನೋಡಲು ಬಂದರು. ಆ ವೇಳೆಗೆ ಅಲ್ಲಿಂದ ನಾನು ಈಜಿಕೊಂಡು ಬೇರೆಡೆ ತೆರಳಿದ್ದೆ ಎಂದು ಹೇಳಿದ್ದಾಳೆ.

ಬಾಲಕಿ ಮನೆಯಲ್ಲಿ ಮದುವೆಗೆ ಒತ್ತಾಯಿಸುತ್ತಿದ್ದರಿಂದಾಗಿ ಆಕೆಯನ್ನು ಅಕ್ಕನ ಗಂಡ ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು. ನಾನು ಆಕೆಯ ಅಕ್ಕನ ಪತಿ. ಎರಡು ತಿಂಗಳಿಂದ ಆಕೆ ನಮ್ಮೊಂದಿಗೆ ವಾಸವಿದ್ದಾಳೆ. ಅವರ ಪಾಲಕರಿಗೆ ಆಕೆ ಓದುವುದು ಇಷ್ಟವಿಲ್ಲ. ಬದಲಿಗೆ ಮದುವೆ ಮಾಡಲು ಮುಂದಾಗಿದ್ದರು. ಕೆಲ ದಿನಗಳ ಹಿಂದಷ್ಟೇ ನಮ್ಮ ಮನೆಯಿಂದ ಆಕೆಯನ್ನು ಕರೆದೊಯ್ದಿದ್ದರು. ಬಳಿಕ ಬಾಲಕಿ ಕಾಲುವೆ ಬಳಿ ದೊರಕಿರುವುದಾಗಿ ನನಗೆ ಕರೆ ಬಂತು ಎಂದು ತಿಳಿಸಿದ್ದಾರೆ.

ಸದ್ಯ ಸಂತ್ರಸ್ತೆಯ ತಂದೆ ಮತ್ತು ಅಣ್ಣನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ. ಬಾಲಕಿಯಿಂದ ಹೇಳಿಕೆಯನ್ನು ಪಡೆದಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ಕೈಗೊಳ್ಳುತ್ತಿದ್ದೇವೆ. ದೊರಕುವ ಆಧಾರಗಳ ಮೇಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ದಿನೇಶ್‌ ತ್ರಿಪಾಠಿ ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *