ಫೇಸ್‌ಬುಕ್‌ನಲ್ಲಿ ಪರಿಚಯ: ಅಪ್ರಾಪ್ತೆಯನ್ನು ದೇಗುಲಕ್ಕೆ ಕರೆದು ಅತ್ಯಾಚಾರ

ಚೆನ್ನೈ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಪಾಲಕರು ನೀಡಿದ ದೂರಿನ ಆಧಾರದಲ್ಲಿ 21 ವರ್ಷದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪರಸ್ಸಳ ಪ್ರದೇಶದ ಅಲಾಕಾಟ್‌ ಇಲ್ಲಮ್‌ ನಿವಾಸಿ ಕೃಷ್ಣ ಪ್ರಸಾದ್‌ ಎನ್ನಲಾಗಿದ್ದು, ವೈಕೋಮ್‌ನ ಧನ್ವಂತರಿ ದೇಗುಲದಲ್ಲಿ ಅರ್ಚಕನಾಗಿ ಕೆಲಸ ನಿರ್ವಹಿಸುತ್ತಿದ್ದ.

ಫೇಸ್‌ಬುಕ್‌ ಮೂಲಕ ಪ್ರಸಾದ್‌ಗೆ 10 ನೇ ತರಗತಿ ಓದುತ್ತಿದ್ದ ಬಾಲಕಿಯ ಪರಿಚಯವಾಗಿತ್ತು. ಆಕೆಗೆ ಆಮಿಷವೊಡ್ಡಿ ನನ್ನನ್ನು ಭೇಟಿ ಮಾಡುವಂತೆ ಹೇಳಿದ ಅರ್ಚಕ ದೇಗುಲಕ್ಕೆ ಕರೆಸಿಕೊಂಡು ಕೊಠಡಿಯೊಂದರಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳು ನಾಪತ್ತೆಯಾಗಿರುವ ಕುರಿತು ಬಾಲಕಿಯ ಪಾಲಕರು ದೂರು ದಾಖಲಿಸಿದ ಬೆನ್ನಲ್ಲೇ ಪ್ರಸಾದ್‌ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸಾದ್‌ ವಿರುದ್ಧ ಐಪಿಸಿ ಸೆಕ್ಷನ್‌ ಅಡಿ ಅಪಹರಣ, ಬೆದರಿಕೆ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪೋಕ್ಸೊ ಕಾಯಿದೆಯಡಿಯು ಪ್ರಕರಣ ದಾಖಲಾಗಿದೆ.

ಈ ಹಿಂದೆ ನಡೆದ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಪ್ರಸಾದ್​ ಮುಖ್ಯ ಆರೋಪಿಯಾಗಿದ್ದ. ಆತನ ವಿರುದ್ಧ ಪೊಂಕುನ್ನಮ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *